March 6, 2026
000001

ಚಿತ್ರದುರ್ಗ :

ಕಲಬುರ್ಗಿ ಜಿಲ್ಲೆಯ ಮಳಕೇಡ ಗ್ರಾಮ ಪಂಚಾಯಿತಿ ಅರಿವು ಕೇಂದ್ರದಲ್ಲಿ ವೇತನ ವಿಳಂಬ ಹಾಗೂ ಅಧಿಕಾರಿಗಳ ಕಿರುಕುಳದಿಂದ ಮನನೊಂದು ಕೇಂದ್ರದ ಮೇಲ್ವಿಚಾರಕಿ ಭಾಗ್ಯವಂತಿ ನೇಣಿಗೆ ಶರಣಾಗಿದ್ದು ಸಾವನ್ನಪ್ಪಿರುತ್ತಾರೆ, ಇವರ ಕುಟುಂಬಕ್ಕೆ ನ್ಯಾಯ ದೊಕಿಸಿಕೊಡುವ ಮೂಲಕ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂಬುದಾಗಿ ಅರಿವು ಕೇಂದ್ರದ ಗ್ರಂಥಪಾಲಕರ ಸಂಘದ ಗೌರವ ಅಧ್ಯಕ್ಷರಾದ ಅಂಜನಮೂರ್ತಿ ಮನವಿ ಮಾಡಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳ ಗ್ರಂಥಪಾಲಕರುಗಳು ವೇತನ ವಿಳಂಬ ಹಾಗೂ ಅಧಿಕಾರಿಗಳ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಮಳಕೇಡ ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಮೇಲ್ವಿಚಾರಕಿ ಭಾಗ್ಯವಂತಿ ಕುಟುಂಬಕ್ಕೆ ನ್ಯಾಯ ದೊಕಿಸಿಕೊಡಲು ಒತ್ತಾಯಿಸಿ ಮೌನ ಆಚರಣೆ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳ ಮುಖಾಂತರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ    ಚಿತ್ರದುರ್ಗ ಜಿಲ್ಲಾ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಅರಿವು ಕೇಂದ್ರದ  ಗ್ರಂಥಪಾಲಕರ ಸಂಘದ ಗೌರವ ಅಧ್ಯಕ್ಷರಾದ ಅಂಜನಮೂರ್ತಿ ಹಾಗೂ ಅಧ್ಯಕ್ಷರಾದ ಕುಮಾರ್ ಎಂ.ಡಿ.ಕೋಟೆ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಎಚ್.ರಂಗಯ್ಯ, ಉಪಾಧ್ಯಕ್ಷರಾದ ಗಾದ್ರಿಪಾಲಯ್ಯ, ತ್ರಿವೇಣಿ, ಭವಾನಿ, ಸುಭಾನ್, ಉಮಾ ಹಾಗೂ ಎಲ್ಲಾ ತಾಲೂಕುಗಳಿಂದಲೂ ಗ್ರಂಥಪಾಲಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *