
ಹಿರಿಯೂರು:
ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ. ಮೈತ್ರಿಕೂಟ 25 ಸ್ಥಾನಗಳನ್ನು ಕಡಿಮೆ ಪಡೆದಿದ್ದರೆ, ಮೋದಿ ಅವರು ಪ್ರಧಾನಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಮತಗಳ್ಳತನದ ಮೂಲಕ ಅಧಿಕಾರ ಹಿಡಿದಿರುವ ಪ್ರಧಾನಿಯವರಿಗೆ ಹುದ್ಧೆಯಲ್ಲಿ ಮುಂದುವರೆಯಲು ನೈತಿಕ ಹಕ್ಕಿಲ್ಲ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.
ನಗರದ 15ನೇ ವಾರ್ಡ್ ನಲ್ಲಿ ಭಾನುವಾರ ಕೆ.ಪಿ.ಸಿ.ಸಿ. ವತಿಯಿಂದ ಮತಗಳ್ಳತನ, ಅಧಿಕಾರ ಬಿಡಲು ಆಗ್ರಹಿಸಿ ಹಮ್ಮಿಕೊಳ್ಳಲಾಗಿದ್ದ ಸಹಿ ಚಳುವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬಿಹಾರದಲ್ಲಿ ಚುನಾವಣಾ ಆಯೋಗ ಬಿ.ಜೆ.ಪಿ. ಜೊತೆ ಕೈ ಜೋಡಿಸಿ ಬೇಕಾಬಿಟ್ಟಿಯಾಗಿ ಮತಪರಿಷ್ಕರಣೆ ಮಾಡಲು ಮುಂದಾಗಿತ್ತು. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ಮತಚಲಾಯಿಸುವ ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು, ಹಿಂದುಳಿದವರ ಹೆಸರುಗಳನ್ನು ಪಟ್ಟಿಯಿಂದ ತೆಗೆಯುವ ಹುನ್ನಾರವನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಹಿರಂಗಪಡಿಸಿದ ನಂತರ ಚುನಾವಣಾ ಆಯೋಗ ಸರಿದಾರಿಗೆ ಬಂದಿತು. ಎಂದರಲ್ಲದೆ,
ಕರ್ನಾಟಕದಲ್ಲೂ ಮತಪಟ್ಟಿ ಪರಿಷ್ಕರಣೆಗೆ ಆಯೋಗ ಮುಂದಾಗಿದ್ದು ಇಲ್ಲಿ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಲು ಅವಕಾಶ ಕೊಡುವುದಿಲ್ಲ ಎಂಬುದಾಗಿ ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣ, ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ, ಸ್ಥಾಯಿಸಮಿತಿ ಅಧ್ಯಕ್ಷೆ ಶ್ರೀಮತಿ ರತ್ನಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಈ ಮಂಜುನಾಥ್, ಸುರ್ಯೋದಯ ಅಬ್ದುಲ್ ಅಜೀಜ್, ನವೀದ್, ಶಿವುಯಾದವ್, ಜೆ.ಆರ್. ಸುಜಾತ, ರಜೀಯಾ ಸುಲ್ತಾನ್, ಜ್ಯೋತಿಲಕ್ಷ್ಮೀ ಯಾದವ್, ಶಿವಕುಮಾರ್, ಸಾದತ್ ವುಲ್ಲಾ, ಅಣ್ಣೇಶ್, ಜ್ಞಾನೇಶ್, ಗೌರೀಶ್, ಸತ್ಯನಾರಾಯಣಾಚಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

