
ಶಿರಾ :
ತುಮಕೂರು ಜಿಲ್ಲೆಯ ಶಿರಾದಲ್ಲಿ ಬಡವರ ಡಾಕ್ಟರ್ ಎಂದೇ ಖ್ಯಾತರಾಗಿದ್ದ ವೈದ್ಯರಾದ ಡಾ.ಶಿವಣ್ಣ ಅವರು ನಿಧನರಾಗಿದ್ದು, ಡಾ.ಶಿವಣ್ಣರವರ ನಿಧನವು ತುಮಕೂರು ಜಿಲ್ಲೆಯ ನಾಗರೀಕರಿಗೆ ನಿಜಕ್ಕೂ ತುಂಬಲಾರದ ನಷ್ಟವಾಗಿದೆ ಎಂಬುದಾಗಿ ಡಾ.ಶಿವಣ್ಣರವರ ಅಭಿಮಾನಿಗಳು ಸಂತಾಪವನ್ನು ಸೂಚಿಸಿದ್ದಾರೆ.
ಡಾ.ಶಿವಣ್ಣರವರು ಮೆಕ್ಕಾ ರೈಸ್ ಮಿಲ್ ರಸ್ತೆಯಲ್ಲಿನ ಅವರ ಶಿವಣ್ಣ ಕ್ಲಿನಿಕ್ ನಲ್ಲಿ ಕೇವಲ ಹತ್ತು ರೂಪಾಯಿಗಳನ್ನು ಮಾತ್ರ ಪಡೆದು ಚಿಕಿತ್ಸೆ ನೀಡುತ್ತಾ, ಬಂದ ರೋಗಿಗಳನ್ನು ಪ್ರೀತಿಯಿಂದ ಆರೈಕೆ ಮಾಡುತ್ತಾ ಬಡವರ ಪರ ಅವರು ತೋರಿಸುತ್ತಿದ್ದ ಕಾಳಜಿ ವಿಶೇಷವಾಗಿದ್ದರಿಂದ ಡಾ.ಶಿವಣ್ಣರವರ ನಿಧನದಿಂದ ಅವರ ಅಭಿಮಾನಿಗಳಿಗೆ ತುಂಬಾ ನೋವುಂಟಾಗಿದೆ.
ಡಾ.ಶಿವಣ್ಣರವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ಅವರ ಕುಟುಂಬವರ್ಗದವರಿಗೆ ಹಾಗೂ ಅವರ ಸ್ನೇಹಿತರಿಗೆ ಕರುಣಿಸಲಿ ಎಂಬುದಾಗಿ ಡಾ.ಶಿವಣ್ಣರವರ ಅಭಿಮಾನಿಗಳು ಕಂಬನಿತುಂಬಿ ತುಮಕೂರು ಜಿಲ್ಲೆಯ ಸಾರ್ವಜನಿಕರ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.

