
ಹಿರಿಯೂರು :
ದೇಶದಲ್ಲಿ ಇಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವಂತಹ ಸಂವಿಧಾನವನ್ನು ಆರ್.ಎಸ್.ಎಸ್ ಮತ್ತು ಒಕ್ಕೂಟ ಸಂಘಟನೆಗಳು,ಬೀದಿಗೆ ತಂದು ನಿಲ್ಲಿಸಿದ್ದು, ಕಾರ್ಯಾಂಗ ನ್ಯಾಯಾಂಗ ಮತ್ತು ರಾಜ್ಯಂಗಕ್ಕೆ ಈ ಸನಾತನ ಧರ್ಮದಿಂದ ಅವಮಾನವಾಗಿದ್ದು, ಆರ್.ಎಸ್.ಎಸ್ ಹಾಗೂ ನಕಲಿ ಹಿಂದೂ ಸಂಘಟನೆಗಳು ಸಂವಿಧಾನದ ವಿರೋಧಿಗಳಾಗಿ, ಮನುಸ್ಮೃತಿಯನ್ನು ಮತ್ತು ಚತುರ್ವರ್ಣವನ್ನು ದೇಶದಲ್ಲಿ ಮತ್ತೆ ತರಲು ಪ್ರಯತ್ನಿಸುತ್ತಿವೆ ಎಂಬುದಾಗಿ ಆದಿದ್ರಾವಿಡ ಸಮಾಜದ ಮುಖಂಡರಾದ ಎಚ್.ಎಲ್.ಕೇಶವಮೂರ್ತಿ ಆಪಾದಿಸಿದ್ದಾರೆ.
ಆದ್ದರಿಂದ ಸಾರ್ವಜನಿಕರು ಮುಂದಿನ ತಿಂಗಳು ನವಂಬರ್ ನಲ್ಲಿ ಆರು ಮತ್ತು ಒಂಬತ್ತು ತಾರೀಖಿನಂದು ನಡೆಯುವ ಬಿಹಾರ ವಿಧಾನಸಭೆಯ ಚುನಾವಣೆ 243 ವಿಧಾನಸಭೆ ಸದಸ್ಯರ ಚುನಾಯಿತರಾಗುವ ಸಂದರ್ಭದಲ್ಲಿ ಬಿಹಾರ ರಾಜ್ಯದ ಹಿಂದುಳಿದ ಒಬಿಸಿ ಸಮುದಾಯ ದಲಿತ ಅಹಿಂದ ಸಮುದಾಯದವರು ಅಲ್ಪಸಂಖ್ಯಾತರು ಮುಖ್ಯವಾಗಿ ಯಾದವ ಸಮುದಾಯದವರು ಈ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದರಲ್ಲದೆ,
ಇದಕ್ಕೆ ಬೆಂಬಲವಾಗಿ ಕೇಂದ್ರ ಸರ್ಕಾರದ ಆಡಳಿತ ಪಕ್ಷವಾದ ಬಿಜೆಪಿ ಪಕ್ಷವು ಸನಾತನವಾದಿಗಳಿಂದ ಕೂಡಿರುವ ಆರ್.ಎಸ್.ಎಸ್ ಇತರೆ ನಕಲಿ ಹಿಂದೂ ಸಂಘಟನೆಗಳ ಭಾಗವಾಗಿದ್ದು, ರಾಜ್ಯದಲ್ಲಿರುವ ಹಿಂದುಳಿದ ಅಲ್ಪಸಂಖ್ಯಾತ ಒಬಿಸಿ ಸಮುದಾಯದ ಬಡವರ ಶೋಷಿತರ ಕೂಲಿ ಕಾರ್ಮಿಕರ ಮತ್ತು ದಲಿತ ಸಮುದಾಯದವರ ಪ್ರಗತಿ ಮತ್ತು ಅವರ ಅಭಿವೃದ್ಧಿಯ ವಿರೋಧಿಯಾಗಿ ವರ್ತಿಸುತ್ತಿದೆ.
ಪ್ರಜಾಪ್ರಭುತ್ವವನ್ನು ತಿರಸ್ಕರಿಸಿ ಮನಸ್ಪೃತಿಯನ್ನು ಮತ್ತು ಸನಾತನ ಧರ್ಮದಂತೆ ರಾಜ್ಯದ ಜನರಲ್ಲಿ ಗುಲಾಮಗಿರಿಯನ್ನು ಬಯಸುತ್ತಿದ್ದಾರೆ, ಹಾಗಾಗಿ ಬಿಹಾರದ ಜನರು ಎಚ್ಚೆತ್ತುಕೊಂಡು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಎತ್ತಿ ಹಿಡಿದು ಸನಾತನ ಧರ್ಮದ ಹಿಡಿತಕ್ಕೆ ಸಿಗದೆ ಸನಾತನ ಧರ್ಮದ ಬೆಂಬಲಿತ ಬಿಜೆಪಿ ಪಕ್ಷವನ್ನು ಬಿಹಾರದಿಂದ ಓಡಿಸಿ ಅವರಿಗೆ ಮತ ಹಾಕದೆ ಬಿಜೆಪಿ ಪಕ್ಷವನ್ನು ಸೋಲಿಸಿ ಪ್ರಜಾಪ್ರಭುತ್ವದ ಸಂವಿಧಾನದ ಆಶಯಗಳನ್ನು ಒಪ್ಪಿಕೊಂಡು ರಾಜ್ಯದ ಜನರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಪಕ್ಷಕ್ಕೆ ಬೆಂಬಲ ನೀಡಬೇಕು.
ಬಿಜೆಪಿ ಪಕ್ಷಕ್ಕೆ ಮತ ನೀಡದೆ, ಸಂವಿಧಾನವನ್ನು ಗೌರವಿಸುವ ಪ್ರಜಾಪ್ರಭುತ್ವಕ್ಕೆ ಕಟಿಬದ್ಧವಾದ ಪಕ್ಷವನ್ನು ಗೆಲ್ಲಿಸುವುದರ ಮೂಲಕ ಸಂವಿಧಾನದ ಗೌರವವನ್ನು ಎತ್ತಿ ಹಿಡಿಯಬೇಕೆಂದು ಮತದಾರ ಬಂಧುಗಳಲ್ಲಿ ವಿನಯ ಪೂರ್ವಕವಾಗಿ ಆದಿದ್ರಾವಿಡ ಸಮಾಜದ ಮುಖಂಡರಾದ ಎಚ್.ಎಲ್.ಕೇಶವಮೂರ್ತಿ ರವರು ಮನವಿ ಮಾಡಿದ್ದಾರೆ.

