March 2, 2026
00003

ಹಿರಿಯೂರು:

ತಾಲ್ಲೂಕಿನ ರೈತರ ಜೀವನಾಡಿಯಾಗಿರುವ ವಾಣಿವಿಲಾಸ ಸಾಗರ ಜಲಾಶಯವು ಕೋಡಿ ಬೀಳುವ ಹಂತವನ್ನು ತಲುಪಿದ್ದು, ಈಗಾಗಲೇ ಜಲಾಶಯದ ನೀರಿನ ಮಟ್ಟ 129.40 ಅಡಿ ಆಗಿದ್ದು,ಇಂದು ರಾತ್ರಿ ಅಥವಾ ನಾಳೆ ವೇಳೆಗೆ ಜಲಾಶಯ  ಬಹುತೇಕ ಕೋಡಿ  ಬೀಳಲಿದೆ ಎಂಬುದಾಗಿ ತಿಳಿದುಬಂದಿದೆ.

ಆದ್ದರಿಂದ ಸಾರ್ವಜನಿಕರು ವಾಣಿವಿಲಾಸಸಾಗರ ಜಲಾಶಯದ ಹಿನ್ನೀರಿನಲ್ಲಿ ಇಳಿಯುವುದು, ಈಜಾಡುವುದು, ದನಕರುಗಳ ಮೈ ತೊಳೆಯುವುದು, ಬಟ್ಟೆ ತೊಳೆಯಲು ಹೋಗಬಾರದು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂಬುದಾಗಿ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

About The Author

Leave a Reply

Your email address will not be published. Required fields are marked *