March 6, 2026
00001

ಹಿರಿಯೂರು:

ತಾಲ್ಲೂಕಿನ ಮದ್ದಿಹಳ್ಳಿ ಗ್ರಾಮದ ಪಲ್ಲವಿ ಎಂಬ ಮಹಿಳೆಯು 7ತಿಂಗಳ ಗರ್ಭಿಣಿಯಾಗಿದ್ದು, ಇಲ್ಲಿನ ಆಶಾಕಾರ್ಯಕರ್ತೆ ಕೆ.ಯಶೋದಮ್ಮ ಇವರ ಬಳಿಗೆ ಹೋಗಿ ಹೊಟ್ಟೆ ನೋವು ಎಂದು ಹೋದಾಗ ತಕ್ಷಣ ಇವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಶೀಘ್ರ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾದರು.

ಇವರು ಯಾವುದೋ ಟಾಟಾಎಸಿ ವಾಹನದಲ್ಲಿ ಹತ್ತಿರದ ಆಸ್ಪತ್ರೆಗೆ ಕರೆತರುವಾಗ ದಾರಿಯ ಮದ್ಯೆ ನೋವು ಹೆಚ್ಚಾಗಿದ್ದರಿಂದ ಡಾ. ಕವಿತಾ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಅವರಿಂದ ಸಲಹೆಯನ್ನು ಪಡೆದು ಟಾಟಾಎಸಿ ವಾಹನವನ್ನು ಪಕ್ಕಕ್ಕೆ ನಿಲ್ಲಿಸಿ, ವೈದ್ಯರ ಮಾರ್ಗದರ್ಶನದಂತೆ ಸುಖವಾಗಿ ಹೆರಿಗೆ ಮಾಡಿಸಿದ್ದಾರೆ.

ಅಲ್ಲಿಂದ ಧರ್ಮಪುರದ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ತಾಯಿ ಮಗುವನ್ನು ಕರೆತಂದು ತೋರಿಸಿದಾಗ ತಾಯಿ ಆರೋಗ್ಯವಾಗಿದ್ದು,  ಮಗುವಿನ ತೂಕ ಕಡಿಮೆ ಇದ್ದಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಈ ವಿಷಯವನ್ನು ತಿಳಿದ ಅಕ್ಕ-ಪಕ್ಕದ ಗ್ರಾಮಸ್ಥರು ಆಶಾಕಾರ್ಯಕರ್ತೆ ಕೆ.ಯಶೋದಮ್ಮರವರ ಬಗ್ಗೆ ತುಂಬಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

About The Author

Leave a Reply

Your email address will not be published. Required fields are marked *