March 2, 2026
01

ಹಿರಿಯೂರು :

ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೃದಯಾಘಾತದಂತಹ ತುರ್ತು ಸಮಯದಲ್ಲಿ  ಅಂದರೆ ಗೋಲ್ಡನ್ ಅವರ್ ಸನ್ನಿವೇಶಗಳಲ್ಲಿ ಸರ್ಕಾರ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಹೆಸರಿನಲ್ಲಿ ಸುಮಾರು 40 ರಿಂದ 50ಸಾವಿರ ಬೆಲೆಬಾಳುವ ಟೆನೆಕ್ಟ ಪ್ಲಸ್ ಎನ್ನುವ ಇಂಜೆಕ್ಷನ್ ಅನ್ನು ಕೊಡಬೇಕೆಂದು ಯೋಜನೆಯನ್ನು ರೂಪಿಸಿದೆ.

ಈ ಇಂಜೆಕ್ಷನ್ ನಿಂದ ಹೆಪ್ಪುಗಟ್ಟಿರುವ ರಕ್ತ ತೆಳುವಾಗಿ ರೋಗಿ ಹೆಚ್ಚಿನ ಚಿಕಿತ್ಸೆ ಪಡೆಯಲು ದೂರದೂರಿಗೆ ಪ್ರಯಾಣ ಮಾಡಲು ಅನುಕೂಲವಾಗಿ ಸಾವಿನಿಂದ ಪಾರಾಗುತ್ತಾನೆ. ಆದರೆ ನಮ್ಮ ಹಿರಿಯೂರು ತಾಲೂಕಿನಲ್ಲಿ ಹೃದಯಾಘಾತದಂತಹ ಸನ್ನಿವೇಶಗಳಲ್ಲಿ ಟೆನೆಕ್ಟ  ಪ್ಲಸ್ ಎನ್ನುವ ಇಂಜೆಕ್ಷನ್  ಬಳಸುವ ನುರಿತ ವೈದ್ಯರು, ಸಿಬ್ಬಂದಿ, ಹಾಗೂ ಐಸಿಯು ಸಲಕರಣೆಗಳು ಲಭ್ಯವಿಲ್ಲ ಎಂದು ಆಡಳಿತ ಅಧಿಕಾರಿ ಡಾ. ವಿಜಯಕುಮಾರ್ ಹೇಳುತ್ತಾರೆ.

ಸರ್ಕಾರ ಟೆನೆಕ್ಟ  ಪ್ಲಸ್ ನಂತಹ ಇಂಜೆಕ್ಷನ್ ಇದ್ದರೂ ಚಿಕಿತ್ಸೆ  ಸೌಲಭ್ಯ ಒದಗಿಸದೆ ಇದ್ದರೆ ರೋಗಿಗಳಿಗೆ ಯಾವ ರೀತಿಯ ಅನುಕೂಲವಾಗುತ್ತದೆ. ಇದರಿಂದ ಖಾಸಗಿ ಆಸ್ಪತ್ರೆಯಲ್ಲಿ  ವೈದ್ಯರ ಬಳಿ 50ಸಾವಿರಕ್ಕೂ ಹೆಚ್ಚು ಹಣ ಕೊಟ್ಟು ಇಂಜೆಕ್ಷನ್ ಹಾಕಿಸಿಕೊಂಡು ಜೀವಉಳಿಸಿಕೊಳ್ಳುವಂತಹ ಸನ್ನಿವೇಶ ಉಂಟಾಗುತ್ತದೆ.

ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ತುರ್ತಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೃದಯಾಘಾತದಂತಹ ಸನ್ನಿವೇಶಗಳಲ್ಲಿ ಟೆನೆಕ್ಟ  ಪ್ಲಸ್ ಎನ್ನುವ ಇಂಜೆಕ್ಷನ್ ಬಳಸಿ ಚಿಕಿತ್ಸೆ ನೀಡುವಂತಹ ತಜ್ಞ ವೈದ್ಯರು, ಸಿಬ್ಬಂದಿ, ಹಾಗೂ ಐಸಿಯು ಸಲಕರಣೆಗಳ ವ್ಯವಸ್ಥೆ ಮಾಡಿಕೊಡಬೇಕೆಂದು ಕಸವನಹಳ್ಳಿ ರಮೇಶ್ ರವರು ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *