
ಬೆಂಗಳೂರು :
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಪಿ.ಎಲ್.ಡಿ ಬ್ಯಾಂಕ್ 2024-25ನೇ ಸಾಲಿನಲ್ಲಿ ಶೇಕಡ 94ರಷ್ಟು ವಸೂಲಾತಿ ಮಾಡಿರುವ ಪ್ರಯುಕ್ತ ಬ್ಯಾಂಕಿನ ಅಧ್ಯಕ್ಷರಾದ ಎಂ.ಡಿ.ಕೋಟೆ ತಿಪ್ಪೇಸ್ವಾಮಿಯವರನ್ನು ರಾಜ್ಯ ಕೃಷಿ ಬ್ಯಾಂಕಿನ ಅಧ್ಯಕ್ಷರು ಹಾಗೂ ತಿಪಟೂರು ಜನಪ್ರಿಯ ಶಾಸಕರಾದ ಕೆ.ಷಡಕ್ಷರಿ ಇವರು ಚಿತ್ರದುರ್ಗ ಜಿಲ್ಲೆಗೆ ಪ್ರಥಮ ಬಹುಮಾನ ನೀಡಿ, ಸನ್ಮಾನಿಸಿ ಗೌರವಿಸಿದರು.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಭೂ ಅಭಿವೃದ್ಧಿ ಬ್ಯಾಂಕಿನ 96ನೇ ವರ್ಷದ ವಾರ್ಷಿಕೋತ್ಸವ ಹಾಗೂ 2024-25ನೇ ವರ್ಷದ ವಾರ್ಷಿಕ ಸರ್ವಸದಸ್ಯರ ಮಹಾಸಭೆ ಸಮಾರಂಭದಲ್ಲಿ ಹಿರಿಯೂರು ಕೃಷಿ ಬ್ಯಾಂಕಿನ ಅಧ್ಯಕ್ಷ ಎಂ.ಡಿ.ಕೋಟೆ ತಿಪ್ಪೇಸ್ವಾಮಿಯವರನ್ನು ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಬ್ಯಾಂಕಿನ ನಿರ್ದೇಶಕರಾದ ಶ್ರೀಮತಿ ಶೋಭಾ, ಉಮೇಶ್ ಹಾಗೂ ನಿರ್ದೇಶಕರಾದ ಕೆ.ಕೃಷ್ಣಯ್ಯ, ಪಿ.ಎಸ್.ಸಾದತ್ ಉಲ್ಲಾ, ಮಲ್ಲನಾಯಕ್ ವ್ಯವಸ್ಥಾಪಕರಾದ ಪಿ.ಶಿವಮೂರ್ತಿ ಹಾಗೂ ಇತರರು ಉಪಸ್ಥಿತರಿದ್ದರು.

