March 2, 2026
000001

ಹಿರಿಯೂರು :

ಕಲ್ವಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸುವ ವಿಚಾರವಾಗಿ ಸುಮಾರು ಎರಡು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ರೈತರ ನಿರಂತರ ಹೋರಾಟಕ್ಕೆ ಕಿಂಚ್ಚಿತ್ತು ಬೆಲೆ ಕೊಡದ ರಾಜ್ಯದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂಬುದಾಗಿ ಜಿಲ್ಲಾ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಆಪಾದಿಸಿದರು.

ತಾಲ್ಲೂಕಿನ  ಕಲ್ವಳ್ಳಿ ಭಾಗದ ಜೆಜಿಹಳ್ಳಿ ಹೋಬಳಿಯ ಗ್ರಾಮಗಳ ಸುಮಾರು 16 ಕೆರೆಗಳಿಗೆ ವಾಣಿವಿಲಾಸ ಜಲಾಶಯದಿಂದ ನೀರು ಹರಿಸುವ ಸಲುವಾಗಿ ಹೋರಾಟ ಹಮ್ಮಿಕೊಳ್ಳುವ ಬಗ್ಗೆ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಹೋರಾಟದ ರೂಪರೇಷುಗಳ ಬಗ್ಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಬಗ್ಗೆ ಈ ಹಿಂದೆ ಜೆಜೆಹಳ್ಳಿ ಬಂದ್ ಕಾರ್ಯಕ್ರಮ, 256 ದಿನ  ಧರಣಿ ಸತ್ಯಾಗ್ರಹ, ನಾಡಕಚೇರಿಗೆ ಮುತ್ತಿಗೆ, ಬಾರಿ ಕೋಲು ಚಳುವಳಿ, ಪಂಜಿನ ಮೆರವಣಿಗೆ, ಬಾಯಿ ಬಡಿದುಕೊಳ್ಳುವ ಚಳುವಳಿ, ಉರುಳು ಸೇವೆ, ಅರೆ ಬೆತ್ತಲೆ ಸೇವೆ ಹೀಗೆ ನಾನಾ ರೀತಿಯ ಚಳುವಳಿಗಳನ್ನು ಮಾಡಲಾಗಿದ್ದು,

ಅಲ್ಲದೆ ಜೆಜೆಹಳ್ಳಿಯಿಂದ ಪಾದಯಾತ್ರೆ ನಡೆಸಿ, ತಾಲೂಕು ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಾಗೂ ತಾಲೂಕು ಕಚೇರಿ ಮುಂಭಾಗದಲ್ಲಿ ಅಮರಣಾಂತರ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲಾಯಿತು.

ಈ ಸಂದರ್ಭದಲ್ಲಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಬಂದು ಭರವಸೆ ಕೊಟ್ಟ ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್ ರವರು ಇನ್ನು ಮೂರು ತಿಂಗಳ ಒಳಗಾಗಿ ಸರ್ಕಾರದೊಂದಿಗೆ ಸಭೆ ನಡೆಸಿ ಈ ಭಾಗದ ನಿರ್ವಹಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು.

ಸರ್ಕಾರ ಪೂರಕ ಬಜೆಟ್ ಅಲ್ಲಿ ಈಗ 225 ಕೋಟಿ ಹಣ ಮೀಸಲಿಕ್ಕಿರುವ ಬಗ್ಗೆ ವರದಿಯಾಗಿದೆ ಸಚಿವರು ಸರ್ಕಾರದ ಜೊತೆಗೆ 0.5 ಟಿಎಂಸಿ ಅಲೋಕೇಶನ್ ಗೆ ಪತ್ರ ವ್ಯವಹಾರ ನಡೆಸಿರುತ್ತಾರೆ ಆದರೆ ಇದುವರೆಗೂ ಅಲೋಕೇಷನ್ ಆಗಿ ಕಾಮಗಾರಿ ಪ್ರಾರಂಭಿಸದೆ ಇರುವುದು ನಮ್ಮ ಅನುಮಾನಕ್ಕೆ ಕಾರಣವಾಗಿದೆ.

ಮುಂದಿನ ದಿನಗಳಲ್ಲಿ ನಮ್ಮ ಜಮೀನಿನಲ್ಲಿ ಬೆಳೆದಿರುವ ಎಲ್ಲಾ ಫಸಲುಗಳು ಒಣಗುವ ಮುನ್ಸೂಚನೆ ಕಾಣುತ್ತಿದೆ. ಹಾಗಾಗಿ ಸರ್ಕಾರದ ಮೇಲೆ ತೀವ್ರತರದ ಒತ್ತಡ ತರುವ ಹಿನ್ನೆಲೆಯಲ್ಲಿ ಇವತ್ತು ಹೋರಾಟ ಮಾಡಬೇಕಾಗುತ್ತದೆ ಎಂಬುದಾಗಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಒಮ್ಮತದ ತೀರ್ಮಾನದೊಂದಿಗೆ ಎಲ್ಲಾ ಗ್ರಾಮದಲ್ಲಿ ರೈತ ಸಂಘಟನೆ ಪುನರ್ ಸಂಘಟಿಸಿ ಬೆಂಗಳೂರು ವಿಧಾನಸೌಧ  ಚಲೋ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇಂದಿನ ಸಭೆಯಲ್ಲಿ ರೈತ ಮುಖಂಡರುಗಳಾದ ಆಲೂರುಸಿದ್ದರಾಮಣ್ಣ, ಕಣ್ಣಪ್ಪ, ಆರ್.ಕೆ.ಗೌಡ,  ಈರಣ್ಣ, ವಿರೂಪಾಕ್ಷಪ್ಪ, ಸಣ್ಣತಿಮ್ಮಣ್ಣ, ಎಂ.ಆರ್.ಈರಣ್ಣ, ವಜೀರ್ ಸಾಬ್, ಸತೀಶ್, ರಾಮಕೃಷ್ಣ, ಮಂಜುನಾಥ್, ಬಾಲಕೃಷ್ಣ, ಕರಿಯಪ್ಪ, ರಾಮಣ್ಣ, ದ್ಯಾಮಣ್ಣ, ನಿಂಗಪ್ಪ, ಮಾರುತಿ, ಸುರೇಶ್, ಮಂಜುನಾಥ್, ಗಿರೀಶ್, ಸಣ್ಣಪ್ಪ,  ಮಂಜುನಾಥ್,  ಶಶಿಧರ್, ತಿಪ್ಪೇಸ್ವಾಮಿ, ಮಾರುತಿ, ಸೇರಿದಂತೆ ಅನೇಕ ರೈತಮುಖಂಡರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *