
ಹಿರಿಯೂರು :
ತಾಲ್ಲೂಕಿನ ಬಬ್ಬೂರು ಸಮೀಪದಲ್ಲಿರುವ ವೈಟ್ ವಾಲ್ ಬ್ಯಾಂಕೆಟ್ ಹಾಲ್ ಸಭಾಂಗಣದಲ್ಲಿ ದಸರಾ ಹಬ್ಬದ ಪ್ರಯುಕ್ತ ಡಿ.ಪಿ.ಇವೆಂಟ್ ಇವರ ಕಡೆಯಿಂದ ದಾಂಡಿಯಾ ನೈಟ್ಸ್ ಎಂಬ ಕಾರ್ಯಕ್ರಮವು ದಿವ್ಯಶ್ರೀ ಮಂಜುನಾಥ ಮತ್ತು ಪ್ರಕೃತಿ ಗುರುಪ್ರಸಾದ್ ಇವರ ನೇತೃತ್ವದಲ್ಲಿ ತುಂಬಾ ಅದ್ದೂರಿಯಾಗಿ ಮೂಡಿಬಂದಿತು.

ಈ ಕಾರ್ಯಕ್ರಮ ಯಶಸ್ವಿಯಾಗಲು ಕಾರಣಕರ್ತರಾದ ಸನ್ಮಾನ್ಯ ಶ್ರೀ.ಡಿ ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಯೋಜನೆ ಮತ್ತು ಸಾಂಖ್ಯಿಕ ಸಚಿವರು, ಖಾದಿ ಜೆ ರಮೇಶ್ , ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್, ಅಭಿನಂದನ್ ಅಧ್ಯಕ್ಷರು ಬ್ಲಾಕ್ ಬಿಜೆಪಿ, ಬ್ರಿಜೇಶ್ ಯಾದವ್, ಜನರಲ್ ಸೆಕ್ರೆಟರಿ ಯೂತ್ ಕಾಂಗ್ರೆಸ್, ದರ್ಶನ್ ಅಧ್ಯಕ್ಷರು ಯೂತ್ ಕಾಂಗ್ರೆಸ್ , ಹೃತ್ವಿಕಾ ಮಜುಂದಾರ್, ಮಿಸ್ ಇಂಡಿಯಾ ಆಫ್ ತ್ರಿಪುರಾ-2022, ಸ್ಟೀಫನ್ ರಾಯ್, ಕಿಸಾನ್ ಅಂಡ್ ಕೆಟ್ ಮಜ್ ಡೋರ್ ಕಾಂಗ್ರೆಸ್,ಶಾಹಿದ್ ಯೂತ್ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಈ ಕಾರ್ಯಕ್ರಮದ ಸ್ಪಾನ್ಸರ್ ಗಳಾದ ವೈಟ್ ವಾಲ್ ವಿಶ್ವನಾಥ್, ಮ್ಯಾಜಿಕಲ್ ಇವೆಂಟ್ ಪ್ರದೀಪ್, ದಿಲ್ ದಾರ್ ಸೌಂಡ್ಸ್ ಮತ್ತು ಲೈಟಿಂಗ್ಸ್ ಮಕದಾರ್, ಕ್ಯಾಪಚರ್ ಕ್ರೀವ್ ಅಂಡ್ ಪೋಟೋಗ್ರಫಿ ಅಭಿಷೇಕ್, ರಾಕ್ ಡ್ಯಾನ್ಸರ್ ಕ್ರೀವ್ ವಿ. ಅಜಿತ್ ಶ್ರೀ ಶಾರದಾ ಸ್ಪೋರ್ಟ್ಸ್ ರಾಮಕೃಷ್ಣ ಇವರಿಗೂ ಸಹ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸಲಾಯಿತು.
ಈ ಕಾರ್ಯಕ್ರಮಕ್ಕೆ ಬಂದಂತ ಪ್ರೇಕ್ಷಕರು ನೃತ್ಯ, ಸಂಗೀತ ಹಾಗೂ ಮನರಂಜನೆ ಕಾರ್ಯಕ್ರಮದಲ್ಲಿ ತುಂಬಾ ಉತ್ಸಾಹಭರಿತರಾಗಿ ಸಡಗರ-ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

