
ಹಿರಿಯೂರು :
ಇಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ರವರ ನೇತೃತ್ವದಲ್ಲಿ ಹಿರಿಯೂರು ತಾಲೂಕಿನ ಹಲವು ಕಡೆ ಬೆಳೆ ವೀಕ್ಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರೈತರುಗಳಾದ ತಿಮ್ಮಣ್ಣ. ರಂಗಸ್ವಾಮಿ, ಮಧು, ಜಯಣ್ಣ, ತಿಪ್ಪೇಸ್ವಾಮಿ ಮತ್ತು ಇನ್ನು ಹಲವರು ರೈತರು ಸಮೀಕ್ಷಾ ತಂಡಕ್ಕೆ ಬೆಳೆಯ ಸದ್ಯದ ವಿವರವನ್ನು ವಿವರಿಸಿದರು.ಈ ತರ ಯಾವ ಕಾಲದಲ್ಲೂ ನಾಶ ಆಗಿಲ್ಲ. ಇದೇ ರೀತಿ ಮುಂದುವರೆದರೆ ರೈತ ಅತ್ಮಹತ್ಯೆ ಹಾದಿ ಇಡಿಯುವ ಸಮಯ ದೂರ ಇಲ್ಲ ಆದ್ದರಿಂದ ಸರ್ಕಾರ ತಕ್ಷಣವೇ ಎಕರೆಗೆ 50ಸಾವಿರ ನೀಡಿದರೆ ರೈತರು ಜೀವನ ಮಾಡಬಹುದು ಎಂದು ತಮ್ಮ ಅಳಲನ್ನು ತಿಳಿಸಿದರು.

ಮಳೆ ಇಲ್ಲದ ತಮ್ಮ ತಮ್ಮ ಬೇಳೆಯನ್ನು ತೋರಿಸಿ ಹತಾಶೆ ತೋರಿಸಿದರು ,ರೈತಾಪಿ ವರ್ಗದ ಬಬ್ಬೂರು ಗ್ರಾಮ ಪಂಚಾಯಿತಿಯ ಮಜುರೆ, ಮ್ಯಾಕ್ಲೂರಹಳ್ಳಿಯ ಗ್ರಾಮೀಣಪ್ರದೇಶದ ಬರಪೀಡಿತ ಪ್ರದೇಶ ಜನರ ಆಕ್ರೋಶ ಬರಿತ ನುಡಿಗಳು ಹೊರಬಂದವು.

ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಮಾರ್ ಸ್ವಾಮಿ ,ಮತ್ತು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರು ವೆಂಕಟೇಶ್ ಯಾದವ್ , ಕಾರ್ಯದರ್ಶಿಗಳು ರಾಜ್ಯ ಕಾರ್ಯದರ್ಶಿ ಹೊಸದುರ್ಗ ರಾಜೇಶ್ ಬುರುಡೆ ಕಟ್ಟೆ ಮತ್ತು ನಿಖಟ ಪೂರ್ವ ಹಿರಿಯೂರು ಮಂಡಲ ಅಧ್ಯಕ್ಷರಾದ ವಿಶ್ವನಾಥ್ ಮತ್ತು ಸೋಮಣ್ಣ ಹಾಗೂ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿಗಳು ಗೋವಿಂದಪ್ಪ ಮತ್ತು ಮಂಡಲ ಒಬಿಸಿ ಮೋರ್ಚಾ ಅಧ್ಯಕ್ಷರಾದ ಮುರಳೀಧರ ,ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಒಬಿಸಿ ಮೋರ್ಚಾ ಉಪಾಧ್ಯಕ್ಷ ಬಸವರಾಜ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪಾರ್ಥ. ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮತ್ತು ಜೆ.ಬಿ. ರಾಜಣ್ಣ, ವೇದಮೂರ್ತಿ ಜಿಲ್ಲಾ ಬಿಜೆಪಿ ಸಂಘಟನೆ ಕಾರ್ಯದರ್ಶಿಯವರು,ವಕೀಲರಾದ ನಾಗಣ್ಣ, ರಂಗಯ್ಯ, ಬಸವರಾಜ್, ಪ್ರಜಾವಾಣಿ ಪತ್ರಿಕೆ ನಾಗಣ್ಣ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ನಿತಿನ್ ಗೌಡ ,ಒಬಿಸಿ ಮೋರ್ಚಾ ಮಂಡಲ ಉಪಾಧ್ಯಕ್ಷ ರಂಗಪ್ಪ ಉಪಸ್ಥಿತರಿದ್ದರು.

