
ಹಿರಿಯೂರು:
ತಾಲ್ಲೂಕಿನ ಹರ್ತಿಕೋಟೆ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಗ್ರಾಮಸ್ಥರು ತಮ್ಮ ಆಸ್ತಿಗಳ ಎಲ್ಲಾ ದಾಖಲೆಗಳನ್ನು ಸೂಕ್ತವಾಗಿ ಸಂಗ್ರಹಿಸಿಕೊಂಡು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ರತ್ನಮಾಲಾ ಅವರನ್ನು ಭೇಟಿ ಮಾಡಿದರೆ ಅತೀಕಡಿಮೆ ಅವಧಿಯಲ್ಲಿ ಇ-ಸ್ವತ್ತು ಪಡೆಯಬಹುದಾಗಿದೆ ಎಂಬುದಾಗಿ ಗ್ರಾಮಪಂಚಾಯತಿ ಅಧ್ಯಕ್ಷೆಯಾದ ಶ್ರೀಮತಿನಾಗವೇಣಿಹನುಮಂತಪ್ಪ ಅವರು ತಿಳಿಸಿದ್ದಾರೆ.
ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಗ್ರಾಮಸ್ಥರು ಇ-ಸ್ವತ್ತು ಪಡೆಯಲು ಹರಸಾಹಸ ಪಡುತ್ತಿದ್ದು, ಇ-ಸ್ವತ್ತು ಪಡೆಯುವ ಪ್ರಕ್ರಿಯೆ ಬಗ್ಗೆ ದೂರುಗಳಿದ್ದು, ಸರ್ಕಾರಕ್ಕೆ ಪಾವತಿಸಬೇಕಾದ ಮೊತ್ತವನ್ನು ಮಾತ್ರ ನಿಗಧಿತ ಸಮಯದಲ್ಲಿ ಪಾವತಿಸಿ,ರಸೀದಿ ಮತ್ತು ಇ-ಸ್ವತ್ತು ಪಡೆದುಕೊಳ್ಳಲು ಅನೇಕ ದಿನಗಳಿಂದ ಇರುವ ಕಿರಿಕಿರಿ, ಮಾನಸಿಕ ಒತ್ತಡ ಮತ್ತು ಸಮಸ್ಯೆಯಿಂದ ಮುಕ್ತರಾಗಲು ಪಿಡಿಓ ಶ್ರೀಮತಿ ರತ್ನಮಾಲಾರವರು ದೀಪಾವಳಿಯ ಸಿಹಿಸುದ್ದಿಯಾಗಿ ಕಡಿಮೆ ಅವಧಿಯಲ್ಲಿ ಇ-ಸ್ವತ್ತು ಮಾಡಿಕೊಡಲಿದ್ದಾರೆ ಎಂಬುದಾಗಿ ಅವರು ಹೇಳಿದ್ದಾರೆ.

