March 2, 2026
03

ಹಿರಿಯೂರು : 

ಮಹರ್ಷಿ ವಾಲ್ಮೀಕಿಯವರು ಯಾವುದೇ ಒಂದು ಸಮಾಜದ ಸ್ವತ್ತಲ್ಲ, ಜಾತಿ-ಮತ-ಕುಲವನ್ನು ಮೀರಿ ಎತ್ತರಕ್ಕೆ ಬೆಳೆದಂತಹ ವ್ಯಕ್ತಿಯಾಗಿದ್ದಾರೆ, ಅವರು ರಚಿಸಿದಂತಹ ರಾಮಾಯಣ ಮಹಾಕಾವ್ಯವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಲ್ಲೇ ಒಂದು ಅತ್ಯದ್ಭುತವಾದ ಗ್ರಂಥವಾಗಿ ಹೊರಹೊಮ್ಮಿದೆ ಎಂಬುದಾಗಿ ಕೂನಿಕೆರೆ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಸೀತಾರಾಮು ಹೇಳಿದರು.

ತಾಲ್ಲೂಕಿನ ಕೂನಿಕೆರೆ ಗ್ರಾಮಪಂಚಾಯಿತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಮಹರ್ಷಿವಾಲ್ಮೀಕಿ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಸೀತಾರಾಮು,  ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಕೆ.ಜಿ.ಹನುಮಂತರಾಯ,  ಮುಖ್ಯ ಶಿಕ್ಷಕರಾದ ಕೆ.ಸಿ.ರಮೇಶ್, ಮಂಜುನಾಥ್, ಬಿಲ್ ಕಲೆಕ್ಟರ್ ರವಿ, ಕಂಪ್ಯೂಟರ್ ಆಪರೇಟರ್ ಶ್ರೀಮತಿಮಮತಾ, ಗ್ರ೦ಥಾಲಯ ಮೇಲ್ವಿಚಾರಕರಾದ ಶ್ರೀಮತಿ ರೇಖಾ, ಶ್ರೀಮತಿ ಲತಾ, ನೀರಗಂಟಿಗಳಾದ ಗಜೇಂದ್ರ, ತಿಪ್ಪೇಸ್ವಾಮಿ, ಶ್ರೀವಲಿ  ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *