October 6, 2025
000005

ಹಿರಿಯೂರು:

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಅವಧಿಯಲ್ಲಿ ಶಿಕ್ಷಕರು ಶಿಕ್ಷೆ ನೀಡುವುದರ ಹಿಂದೆ ಯಾವುದೇ ದುರುದ್ದೇಶವಿರುವುದಿಲ್ಲ, ನಮ್ಮ ಮಕ್ಕಳು ಮುಂದಿನ ಭವಿಷ್ಯದಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳಲಿ ಎಂಬ ಸದುದ್ದೇಶವಿರುತ್ತದೆ, ಆದರೆ ಶಿಕ್ಷಕರು ತರಗತಿಯಲ್ಲಿ ನಿಮಗೆ ಹೊಡೆದು ಬಂದು ಎಷ್ಟೋ ಬಾರಿ ಹೊರಗೆ ಕಣ್ಣೀರಿಡುತ್ತಾರೆ ಎಂಬುದಾಗಿ ನಿವೃತ್ತ ಮುಖ್ಯೋಪಾಧ್ಯಾಯರಾದ ಎ.ಅನಂತರೆಡ್ಡಿ ಅವರು ಹೇಳಿದರು.

ತಾಲ್ಲೂಕಿನ ವಿ ವಿ ಪುರ  ಶ್ರೀ ಬಿ.ಎಲ್. ಗೌಡ ಸ್ಮಾರಕ ಪ್ರೌಢಶಾಲೆಯಲ್ಲಿ ಸೆಪ್ಟಂಬರ್ 05ರ ಶುಕ್ರವಾರ 1990ರಿಂದ 1993ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿದ ಸ್ನೇಹಿತರ ಬಳಗದಿಂದ ಗುರುವಂದನಾ ಮತ್ತು ಸ್ನೇಹಿತರ ಸಂಮ್ಮಿಲನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಿವೃತ್ತ ತೋಟಗಾರಿಕಾ ಶಿಕ್ಷಕರಾದ  ಮಂಜುನಾಥಸ್ವಾಮಿ  ಮಾತನಾಡಿ, ನಿಮ್ಮ ಬದುಕು ಎಷ್ಟೊಂದು ಸುಂದರ ಹಾಗೂ ಅದ್ಭುತವಾಗಿದೆ. ಅಂದು ನಾವು ಕೊಟ್ಟ ಶಿಕ್ಷಣ ಇಂದು ನಿಮ್ಮನ್ನು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಎತ್ತರಕ್ಕೆ ಬೆಳೆಸಿದೆ. ಈ ಹಿಂದೆ ಶಿಕ್ಷಣ ಶಿಸ್ತುಬದ್ಧತೆಯಿಂದ ಕೂಡಿತ್ತು. ಆದರೆ, ಪ್ರಸ್ತುತ ಕಾಲ ಬದಲಾಗಿದೆ,

ಸಮಾಜದಲ್ಲಿ ವಿದ್ಯಾವಂತರು ಇಂದು ತಂದೆ-ತಾಯಿ, ಬಂಧು-ಬಳಗ, ಗುರು-ಹಿರಿಯರನ್ನು, ಕಡೆಗಣಿಸುವಂತ ಪರಸ್ಥಿತಿ ಬಂದಿದೆ. ಅಂತಹ ಸಂದರ್ಭದಲ್ಲೂ ನಿಮ್ಮಂತಹ ಉತ್ತಮ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದು ನಮ್ಮ ಭಾಗ್ಯ ಎಂದರಲ್ಲದೆ, ನಿಮ್ಮ ಮೇಲೆ ಸದಾ ನಮ್ಮೆಲ್ಲರ ಆಶೀರ್ವಾದ ಇದ್ದೇ ಇರುತ್ತದೆ ಎಂಬುದಾಗಿ  ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಪುಟ್ಟರಂಗಪ್ಪ ನಿವೃತ್ತ ಕನ್ನಡ ಶಿಕ್ಷಕರು, ಚಂದ್ರಹಾಸ ರೆಡ್ಡಿ ನಿವೃತ್ತ ಗಣಿತ ಶಿಕ್ಷಕರು, ಚಂದ್ರಪ್ಪ ಬಿ.ಎನ್.ನಿವೃತ್ತ ವಿಜ್ಞಾನ ಶಿಕ್ಷಕರು, ಪಂಚಾಕ್ಷರಪ್ಪ ನಿವೃತ್ತ ಹಿಂದಿ ಶಿಕ್ಷಕರು,ಮಂಜುನಾಥಪ್ಪ ನಿವೃತ್ತ ದೈಹಿಕ ಶಿಕ್ಷಕರು,ಇವರುಗಳು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ನಿವೃತ್ತ ಕನ್ನಡ ಶಿಕ್ಷಕರಾದ ಪುಟ್ಟರಂಗಪ್ಪ, ನಿವೃತ್ತ ಗಣಿತ ಶಿಕ್ಷಕರಾದ ಚಂದ್ರಹಾಸರೆಡ್ಡಿ, ನಿವೃತ್ತ ವಿಜ್ಞಾನ ಶಿಕ್ಷಕರಾದ   ಬಿ. ಎನ್. ಚಂದ್ರಪ್ಪ, ನಿವೃತ್ತ ಹಿಂದಿ ಶಿಕ್ಷಕರಾದ ಪಂಚಾಕ್ಷರಪ್ಪ, ನಿವೃತ್ತ ದೈಹಿಕ ಶಿಕ್ಷಕರಾದ ಮಂಜುನಾಥಪ್ಪ,  ಹಳೆಯ ವಿದ್ಯಾರ್ಥಿಗಳಾದ ಪ್ರೊ.ಬಸವರಾಜ ಟಿ.ಬೆಳಗಟ್ಟ, ಶ್ರೀನಿವಾಸ, ಕೆ.ಟಿ.ತಿಪ್ಪೇಸ್ವಾಮಿ, ರಮೇಶಬಾಬು, ನಾಗರಾಜ, ಲಿಂಗಣ್ಣ, ಮುದ್ದುರಾಜು, ನಿರಂಜನಮೂರ್ತಿ, ಜಗನ್ನಾಥ, ರಂಗಸ್ವಾಮಿ, ಸೆಂದಿಲ್, ನಾಗೇಶ್, ಜಗದೀಶ್, ಜಗನ್ನಾಥ, ಹನುಮಂತಪ್ಪ, ತಿಮ್ಮರಾಜು, ಮೂರ್ತಿ, ಸಾವಿತ್ರಮ್ಮ, ಗಾಯತ್ರಿ, ರಾಧ, ಗೀತಾ, ಪಾರ್ವತಮ್ಮ  ಸೇರಿದಂತೆ ಸುಮಾರು 40 ಜನ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *