March 6, 2026
0004

ಹಿರಿಯೂರು:

ರಸ್ತೆಗಳ ಅಭಿವೃದ್ಧಿಯು ಕೇವಲ ಸುಗಮ ಸಂಚಾರಕ್ಕೆ ಮಾತ್ರವಲ್ಲದೆ, ದೇಶದ ಅಭಿವೃದ್ಧಿಯಲ್ಲಿಯೂ ಪ್ರಮುಖಪಾತ್ರವನ್ನು ವಹಿಸುತ್ತವೆ. ಆದ್ದರಿಂದ ನಮ್ಮ ಕಾಂಗ್ರೆಸ್ ಸರ್ಕಾರ  ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುತ್ತಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್  ಅವರು ಹೇಳಿದರು.

ತಾಲ್ಲೂಕಿನ ಮೇಟಿಕುರ್ಕೆ-ಶಿಡ್ಲಯ್ಯನಕೋಟೆ ರಸ್ತೆಯ ಅಭಿವೃದ್ಧಿ ಮತ್ತು ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ, ನಂತರ ಅವರು ಮಾತನಾಡಿದರು.

ಈ ರಸ್ತೆ ಒಟ್ಟು 15.7 ಕಿಲೋಮೀಟರ್ ಉದ್ದವಿದ್ದು, ಅದರ ಪೈಕಿ 10.6 ಕಿಲೋಮೀಟರ್ ಆಯ್ದ ಭಾಗಗಳಲ್ಲಿ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮೇಟಿಕುರ್ಕೆ–ಶಿಡ್ಲಯ್ಯನಕೋಟೆ ಜಿಲ್ಲಾ ಮುಖ್ಯರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಸುಮಾರು 9 ಕೋಟಿ 95 ಲಕ್ಷ ರೂಗಳು ವೆಚ್ಚವಾಗುತ್ತದೆ ಎಂಬುದಾಗಿ ಅವರು ಹೇಳಿದರು.

ಈ  ರಸ್ತೆ ಕಾಮಗಾರಿ ಯೋಜನೆಯು ಪೂರ್ಣಗೊಂಡ ಬಳಿಕ ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶದ ಸಂಚಾರ ಸೌಕರ್ಯ ಸುಧಾರಣೆ, ವ್ಯಾಪಾರ ಚಟುವಟಿಕೆಗಳ ವಿಸ್ತರಣೆ ಮತ್ತು ಸ್ಥಳೀಯ ಜನರ ಜೀವನಮಟ್ಟದ ಏರಿಕೆಗೆ ಇದು ಅತ್ಯಂತ ಸಹಕಾರಿ ಆಗಲಿದೆ ಎಂಬುದಾಗಿ ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಗೂ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *