

ಹಿರಿಯೂರು:
ನಗರದ ನೆಹರೂ ಮೈದಾನದಲ್ಲಿರುವ ಉರ್ದು ಶಾಲೆಯ ಆವರಣದಲ್ಲಿ ಜಾಮೀಯಾ ಮಸ್ಜೀದ್ ವಕ್ಫ್ ಸಂಸ್ಥೆಗೆ 15 ಜನ ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲು ಇದೇ ಅಕ್ಟೋಬರ್ 5ರ ಭಾನುವಾರದಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಚುನಾವಣೆಯನ್ನು ನಡೆಸಲಾಗುತ್ತಿದೆ ಎಂಬುದಾಗಿ ಜಾಮೀಯಾ ಮಸೀದಿ ಮುಖ್ಯಸ್ಥರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ಚುನಾವಣೆಯಲ್ಲಿ ಜಾಮೀಯಾ ಮಸೀದಿ ವಕ್ಫ್ ಸಂಸ್ಥೆಗೆ 15 ಜನ ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲು ನಡೆಯುತ್ತಿರುವ ಚುನಾವಣೆಯನ್ನು ಯಶಸ್ವಿಗೊಳಿಸಲು ಜಾಮೀಯಾ ಮಸ್ಜೀದ್ ವಕ್ಫ್ ಸಂಸ್ಥೆಯ ಸದಸ್ಯರು ಸಿದ್ಧರಾಗಬೇಕು ಎಂಬುದಾಗಿ ಜಾಮೀಯಾ ಮಸೀದಿ ಮುಖ್ಯಸ್ಥರು ಮುಸ್ಲಿಂ ಸಮಾಜದ ಭಾಂಧವರಿಗೆ ಕರೆ ನೀಡಿದ್ದಾರೆ.