October 6, 2025
00001

ಹಿರಿಯೂರು:

ಮಹತ್ಮಾ ಗಾಂಧೀಜಿಯವರ ಅತ್ಯಂತ ಸರಳ ಜೀವನ, ಸತ್ಯ ಮತ್ತು ಅಹಿಂಸಾಮಾರ್ಗ, ಅವರ ಸತ್ಯಾಗ್ರಹಗಳು ಇಡೀ ವಿಶ್ವದ ಗಮನ ಸೆಳೆದಿವೆ. ವಿಶ್ವದ ಅತಿಹೆಚ್ಚು ರಾಷ್ಟ್ರಗಳಲ್ಲಿ  ಮಹಾತ್ಮ ಗಾಂಧೀಜಿಯವರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.

ನಗರದ  ತಾಲ್ಲೂಕು ಬ್ಲಾಕ್  ಕಾಂಗ್ರೆಸ್ ಕಚೇರಿಯಲ್ಲಿ  ಹಮ್ಮಿಕೊಳ್ಳಲಾಗಿದ್ದ   ಗಾಂಧಿಜಯಂತಿ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ   ಸಲ್ಲಿಸಿ ಅವರು ಮಾತನಾಡಿದರು.

ಅಹಿಂಸ ಮಾರ್ಗದಿಂದ ನಡೆದ ಗಾಂಧೀಜಿಯವರ ಮೇಲೆ ಸತ್ಯಹರಿಶ್ಚಂದ್ರ ಮತ್ತು ಶ್ರವಣಕುಮಾರನ ಮಾತಾಪಿತೃ ಭಕ್ತಿ  ಅತಿ ಹೆಚ್ಚು ಪ್ರಭಾವ ಬೀರಿವೆ. ಗಾಂಧೀಜಿ ಮತ್ತು ಶಾಸ್ತ್ರಿಯವರು ವೈಯಕ್ತಿಕ ಜೀವನಕ್ಕೆ  ಮಹತ್ವ ಕೊಡದೆ ತಮ್ಮ ಜೀವನವನ್ನೇ ದೇಶಕ್ಕೆ ಸಮರ್ಪಿಸಿಕೊಂಡಿದ್ದಾರೆ. ಗಾಂಧೀಜಿಯವರ ತತ್ವ-ಸಿದ್ಧಾಂತಗಳನ್ನು  ಯುವಪೀಳಿಗೆ ಸ್ಮರಿಸಬೇಕು ಎಂಬುದಾಗಿ ಅವರು ಹೇಳಿದರು.

ನಗರಬ್ಲಾಕ್ ಕಾಂಗ್ರೆಸ್  ಅಧ್ಯಕ್ಷರಾದ  ಖಾದಿ ಜೆ.ರಮೇಶ್, ತಾಲ್ಲೂಕುಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈರಲಿಂಗೇಗೌಡ, ನಗರಸಭೆ ಅಧ್ಯಕ್ಷರಾದ  ಬಾಲಕೃಷ್ಣ, ಉಪಾಧ್ಯಕ್ಷ ಮಂಜುಳಾ,  ಸ್ಥಾಯಿ ಸಮಿತಿ ಅಧ್ಯಕ್ಷ ವಿಠ್ಠಲ್, ಮಮತ, ಎಂ.ಡಿ.ಸಣ್ಣಪ್ಪ, ಸದಸ್ಯರು ಬಿ.ಎನ್.ಪ್ರಕಾಶ್, ಅಂಬಿಕಾ,  ರಮೇಶ್ ಬಾಬು, ಮುಖಂಡರಾದ  ಜ್ಞಾನೇಶ್, ಪಿಲಾಲಿಮಂಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *