

ಹಿರಿಯೂರು:
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಆಯೋಜನೆಗೊಂಡಿರುವ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದ್ದು, ತಮ್ಮ ವಾರ್ಡ್ ಗಳಲ್ಲಿ ಸರ್ವೆ ಕಾರ್ಯ ಆಗದೇ ಇದ್ದಲ್ಲಿ ಗಣತಿದಾರರು, ಮೇಲ್ವಿಚಾರಕರು, ಕಂದಾಯಾಧಿಕಾರಿಗಳು, ಕಂದಾಯನಿರೀಕ್ಷಕರು,ಆರೋಗ್ಯನಿರಕ್ಷಕರುಗಳು, ದಫೇದಾರಗಳು, ಡ್ರೈವರ್ ಗಳ, ಸರಬರಾಜು ಸಿಬ್ಬಂದಿಗಳ ಸಹಾಯ ಪಡೆದು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಸರ್ವಕಾರ್ಯವನ್ನು ಪೂರ್ಣಗೊಳಿಸಲು ಸಹಕರಿಸಬೇಕು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ರವರು ಹೇಳಿದರು.
ಅಲ್ಲದೆ, ನಿಮ್ಮ ವಾರ್ಡ್ ಗಳಲ್ಲಿ ಗಣತಿಕಾರ್ಯ ಆಗದೆ ಇದ್ದಲ್ಲಿ ದಯವಿಟ್ಟು ನಗರ ವ್ಯಾಪ್ತಿಯಲ್ಲಿ ಇರತಕ್ಕಂತಹ ಗಣತಿದಾರರು ಹಾಗೂ ವಿಶೇಷವಾಗಿ ಮೇಲ್ವಿಚಾರಕರುಗಳ ಗಮನಕ್ಕೆ ಮಾಹಿತಿ ತಿಳಿಸಬೇಕು ಎಂಬುದಾಗಿ ಅವರು ಹೇಳಿದರು.