

ಹಿರಿಯೂರು:
ತಾಲ್ಲೂಕಿನ ಶ್ರೀಹಾರಿಕಣಿಮೇ ರಂಗನಾಥ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಭೇಟಿಕೊಟ್ಟು ಸ್ವಾಮಿಯ ದರ್ಶನ ಪಡೆದು ರಾಜ್ಯದಲ್ಲಿ ಉತ್ತಮ ಮಳೆ-ಬೆಳೆ ಆಗುವಂತೆ ಹಾಗೂ ರಾಜ್ಯದ ಜನತೆಯ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ನಗರಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿಜಿ.ರಮೇಶ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ, ನಗರಸಭಾಧ್ಯಕ್ಷ ಬಾಲುಆಚಾರ್, ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಮಮತಾ ಸುಂದರ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ನಾಗೇಂದ್ರ ನಾಯಕ್, ಪ್ರೇಮ್ ಕುಮಾರ್, ಪ್ರಕಾಶ್ ಜೈನ್, ಗಿಡ್ಡೋಬನಹಳ್ಳಿ ಅಶೋಕ್, ಕಲ್ಲಟ್ಟಿ ಹರೀಶ್, ಜ್ಞಾನೇಶ್, ಶಿವಕುಮಾರ್, ಗಿರೀಶ್, ದರ್ಶನ್, ಲಿಂಗರಾಜು, ಶಿವಕುಮಾರ್, ಸ್ಥಳೀಯ ಮುಖಂಡರಾದ ರಂಗಸ್ವಾಮಿ ಸ್ವಾಮಿ, ದೇವಸ್ಥಾನದ ಅರ್ಚಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.