

ಹಿರಿಯೂರು:
ರಾಜ್ಯದ ಆರ್ಯವೈಶ್ಯ ವಿದ್ಯಾಸಂಸ್ಥೆಗಳ ಒಕ್ಕೂಟವು ಸುಮಾರು ಕಳೆದ 40 ವರ್ಷಗಳಿಂದ ಶಿಕ್ಷಣಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಯಾವುದೇ ಫಲಅಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವಾಮನೋಭಾವದಿಂದ ಕೆಲಸ ಮಾಡುತ್ತಿದೆ. ಸಮಾಜಕ್ಕೆ ಸಮುದಾಯದ ವತಿಯಿಂದ ಉತ್ತಮಶಿಕ್ಷಣ ಕೊಡಿಸುವ ಉದ್ದೇಶ ಮಹಾಸಭಾ ಹೊಂದಿದೆ ಎಂಬುದಾಗಿ ರಾಜ್ಯ ಆರ್ಯವೈಶ್ಯ ವಿದ್ಯಾಸಂಸ್ಥೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕೆ. ವಿ.ಅಮರೇಶ್ ಅವರು ಹೇಳಿದರು.
ನಗರದ ಶ್ರೀವಾಗ್ದೇವಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ಆರ್ಯವೈಶ್ಯ ವಿದ್ಯಾ ಸಂಸ್ಥೆಗಳ ಒಕ್ಕೂಟದ ಆಡಳಿತ ಮಂಡಳಿಯವರಿಗೆ ಕರ್ನಾಟಕಆರ್ಯವೈಶ್ಯ ವಿದ್ಯಾ ಸಂಸ್ಥೆಗಳ ಒಕ್ಕೂಟ ಮತ್ತು ಶ್ರೀ ವಾಗ್ದೇವಿ ವಿದ್ಯಾಸಂಸ್ಥೆವತಿಯಿಂದ ಹಮ್ಮಿಕೊಳ್ಳಲಾಗಿ ಒಂದು ದಿನದ ವಿಶೇಷ ಶೖಕ್ಷಣಿಕ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಅಭಿವೃದ್ಧಿಗೆ ಮುಂದಾಗಿ ತನ್ನದೇ ಆದ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಶಿಕ್ಷಣ ಕ್ಷೇತ್ರದ ಉನ್ನತಿಗೆ ಶ್ರಮಿಸುತ್ತಿದೆ ಎಂಬುದಾಗಿ ಅವರು ಹೇಳಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ದಾವಣಗೆರೆಯ ಶ್ರೀನಿವಾಸ್ ರವರು ಮಾತನಾಡಿ ಶಿಕ್ಷಣವೆಂಬದು ಜ್ಞಾನ. ಸತತ ಪರಿಶ್ರಮ. ಸಾಧನೆ. ಅನುಭವದ ಮೂಲಕ ಪಡೆಯುವುದಾಗಿದೆ. ಶಿಕ್ಷಣಸಂಸ್ಥೆಗಳು ನೆಪ ಮಾತ್ರಕ್ಕೆ ಶಿಕ್ಷಣನೀಡದೆ.
ಶಿಕ್ಷಣದಲ್ಲಿ ಗುಣಮಟ್ಟ, ತಾಂತ್ರಿಕತೆ ಕೌಶಲ್ಯ. ಆಧುನಿಕತೆ ಸೌಲಭ್ಯಗಳನ್ನು ನೀಡುವಲ್ಲಿ ಮುಂದಾಗಬೇಕು. ಶಿಕ್ಷಕರಿಗೆ ಕಾಲಕಾಲಕ್ಕೆ ತರಬೇತಿಗಳನ್ನು ಕೊಡಿಸಬೇಕು. ತರಗತಿ ಕೋಣೆಯಲ್ಲಿ ಶಿಕ್ಷಕರು ಕಲಿಕೆ ಮತ್ತು ಕಲಿಸುವಿಕೆ ಸ್ವತಂತ್ರ ಮತ್ತು ಪರಿಶ್ರಮದಾಯಕವಾಗಿರಬೇಕು.
ಮಕ್ಕಳ ಕಲಿಕಾ ಸಾಮರ್ಥ್ಯದ ಬಗ್ಗೆ ಶಿಕ್ಷಕರ ಹಾಗೂ ಪೋಷಕರ ಸಂಪೂರ್ಣ ಸಹಕಾರವಿರಬೇಕು.ವಿದ್ಯಾ ಸಂಸ್ಥೆಗಳ ಮೇಲೆ ಪೋಷಕರ ನಂಬಿಕೆ ವಿಶ್ವಾಸ ಬರುವಂತ ಶಿಕ್ಷಣವನ್ನ ಕೊಡಿಸುವಲ್ಲಿ ನಡೆಯುತ್ತಿರಬೇಕು ವಿಶೇಷವಾಗಿ ಕಲಿಕೆಯಲ್ಲಿ ಕೌಶಲ್ಯಗಳನ್ನು ಅಳವಡಿಸಬೇಕು ಕಲಿಕೆ ಸಂತಸದಾಯಕವಾಗಿರಬೇಕು ಎಂಬುದಾಗಿ ಅವರು ಹೇಳಿದರು.ಈ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.