

ಹಿರಿಯೂರು:
ಇತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಹರ್ತಿಕೋಟೆ ಗ್ರಾಮದಲ್ಲಿ ವಿಶೇಷವಾಗಿ ಸಾಕಷ್ಟು ಸಮುದಾಯಗಳ ದೇವರಕಟ್ಟೆ ಮನೆ ಇಲ್ಲಿದ್ದು, ದಸರಾ ಮಹೋತ್ಸವವನ್ನು ಈ ಗ್ರಾಮದಲ್ಲಿ ತುಂಬಾ ವಿಶೇಷವಾಗಿ ಪ್ರತಿ ವರ್ಷ ಎಲ್ಲರು ಸೌಹಾರ್ದಯುತವಾಗಿ ಆಚರಣೆ ಮಾಡಲಾಗುತ್ತಿದೆಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.
ತಾಲ್ಲೂಕಿನ ಹರ್ತಿಕೋಟೆ ಗ್ರಾಮದ ಹುಲೇನೂರ ಬೆಡಗಿನ ಆರಾಧ್ಯದೈವ ಶ್ರೀಕೆಂಚಲಿಂಗೇಶ್ವರಸ್ವಾಮಿ ದೇವರ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಹರ್ತಿಕೋಟೆ ಗ್ರಾಮದ ಕೆಂಚಲಿಂಗೇಶ್ವರ ದೇವಸ್ಥಾನ ನೂತನ ಅಭಿವೃದ್ಧಿಗೆ 25ಲಕ್ಷ ರೂಗಳ ಅನುದಾನ ನೀಡಲಾಗುವುದು ಎಂಬ ಭರವಸೆ ನೀಡಿದರಲ್ಲದೆ, ಸಮುದಾಯದ ಜನರು ಶೈಕ್ಷಣಿಕವಾಗಿ ಇನ್ನೂ ಹೆಚ್ಚಿನ ಪ್ರಗತಿ ಕಾಣಬೇಕು ಎಂದಾದರೆ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಬೇಕು ಎಂಬುದಾಗಿ ಅವರು ಹೇಳಿದರು.
ಕೆ.ಪಿ.ಸಿ.ಸಿ. ಸದಸ್ಯರಾದ ಕಂದಿಕೆರೆಸುರೇಶ್ ಬಾಬು ಅವರು ಮಾತನಾಡಿ, ಸರ್ಕಾರ ಜಾತಿಗಣತಿ ಸಮೀಕ್ಷೆ ಆರಂಭಿಸಿದ್ದು, ಎಲ್ಲರೂ ಗಣತಿದಾರರಿಗೆ ಸಹಕರಿಸಿ ಕಡ್ಡಾಯವಾಗಿ ಜಾತಿ ನೊಂದಾಣೆ ಮಾಡಿಸಬೇಕು ಎಂಬುದಾಗಿ ಹೇಳಿದರು.

ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಮಹಂತೇಶ್ ಅವರು ಮಾತನಾಡಿ, ಜಾತಿ ಮತ್ತು ಉಪಜಾತಿಕಾಲಂನಲ್ಲಿ ಕುರುಬ ಎಂದು ಬರೆಸಿ, ಕುಲಕಸುಬು ಕುರಿ, ಮೇಕೆ ಸಾಕಾಣಿಕೆ, ಉಣ್ಣೆ ಕಂಬಳಿನೇಯ್ಗೆ ಎಂದು ನಮ್ಮ ಸಮಾಜದ ಬಾಂಧವರು ಗಣತಿಯಲ್ಲಿ ಬರೆಸಬೇಕು ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಗೊರವಯ್ಯಗಳಿಂದ ದೋಣಿಸೇವಾ ಪೂಜೆ ನಡೆಸಲಾಯಿತು ಹಾಗೂ ಅನ್ನ ದಾಸೋಹಕ್ಕೆ ದೇಣಿಗೆ ನೀಡಿದ ಭಕ್ತರಿಗೆ ಸಮಿತಿಯಿಂದ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೆಂಚಲಿಂಗೇಶ್ವರದೇವಸ್ಥಾನ ಸಮಿತಿ ಅಧ್ಯಕ್ಷ ಕೊಂಡ್ಲಹಳ್ಳಿ ಗುರುಲಿಂಗಪ್ಪ, ಕಾರ್ಯದರ್ಶಿಮದ್ದಿಹಳ್ಳಿಮಹಾಲಿಂಗಪ್ಪ, ಮಾಜಿಸೈನಿಕ ರೇಣುಕಾಪ್ರಸಾದ್, ತೆಂಗುನಾರಿನ ಮಹಾಮಂಡಳದ ರಾಜ್ಯ ಅಧ್ಯಕ್ಷ ಗೋಡೆತಿಪ್ಪೇಸ್ವಾಮಿ, ಗ್ರಾಮಪಂಚಾಯಿತಿ ಅಧ್ಯಕ್ಷ ನಾಗವೇಣಿ ಹನುಮಂತರಾಯ, ಸಮುದಾಯದ ಮುಖಂಡ ಪ್ರೇಮದಾಸ್, ಕೆಂಚಲಿಂಗಪ್ಪ ಹಾಗೂ ದೇವಸ್ಥಾನ ಸಮಿತಿ ಉಪಾಧ್ಯಕ್ಷ ರಮೇಶ್ ಹಾಗೂ ಎಲ್ಲಾ ನಿರ್ದೇಶಕರು, ಗೌಡ,ಯಜಮಾನ, ಪೂಜಾರು ಹಾಗೂ ದೇವಸ್ಥಾನದ ಎಲ್ಲಾ ಕೈವಾಡದವರು ಭಕ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.