

ಹಿರಿಯೂರು:
ಶ್ರೀ ಶುಭೋದಯ ಸೇವಾ ವೃದ್ದಾರಶ್ರಮದ ವೃದ್ಧರ ನೆರವಿಗೆ ನಮ್ಮ ಸೇವೆ ಹಾಗೂ ಸಹಾಯ ಸದಾ ಇರುತ್ತದೆ, ಶ್ರೀ ಶುಭೋದಯ ಸೇವಾ ವೃದ್ದಾರಶ್ರಮಕ್ಕೆ ಯಾವುದೇ ರೀತಿಯ ಸಹಕಾರ ಬೇಕಿದ್ದರೆ ಯಾವುದೇ ಸಂಕೋಚವಿಲ್ಲದೆ, ಕೇಳಿ, ಅಗತ್ಯವಾಗಿ ನೀಡುತ್ತೇವೆ ಎಂಬುದಾಗಿ ಶಾಯಿದ್ ಅವರು ಹೇಳಿದರು.
ತಾಲ್ಲೂಕಿನ ಭೀಮನಬಂಡೆಯ ಶ್ರೀಶುಭೋದಯ ಸೇವಾವೃದ್ಧಾಶ್ರಮದಲ್ಲಿ ಆಶ್ರಮದಲ್ಲಿ ಮೊಹಮ್ಮದ್ ಪೈಗಂಬರ್ ಹುಟ್ಟಿದ ದಿನ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಅವರ ಗುರುಗಳು, ಸ್ನೇಹಿತರ ಜೊತೆಗೆ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮವಾಸಿಗಳಿಗೆ ಮಧ್ಯಾಹ್ನದ ಅನ್ನಸಂತರ್ಪಣೆ ಮಾಡಿ, ನಂತರ ಅವರು ಮಾತನಾಡಿದರು.

ಶ್ರೀಶುಭೋದಯ ಸೇವಾ ವೃದ್ಧಾಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿ ಮಾತನಾಡಿ, ಶ್ರೀಯುತ ಶಾಯಿದ್ ಹಾಗೂ ಅವರ ಗುರುಗಳು, ಸ್ನೇಹಿತರ ಈ ಸೇವಾ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು, ಶಾಯಿದ್ ರವರನ್ನು ಸಮಾಜದ ಪ್ರತಿಯೊಬ್ಬರೂ ಅನುಸರಿಸಿದರೆ ವೃದ್ಧಾಶ್ರಮದ ವೃದ್ಧರು ಹಸಿವುಮುಕ್ತರಾಗಿ ಸುಖವಾಗಿರಬಹುದು ಎಂಬುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಶುಭೋದಯ ಸೇವಾ ವೃದ್ಧಾಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿ ಅವರು ಶಾಯದ್ ಹಾಗೂ ಅವರ ಗುರುಗಳು, ಸ್ನೇಹಿತರ ಕುಟುಂಬಕ್ಕೆ ದೇವರ ಕೃಪಾರ್ಶಿವಾದ ಸದಾ ಇರಲಿ ಎಂಬುದಾಗಿ ವೃದ್ಧಾಶ್ರಮದ ಹಿರಿಯರ ಪರವಾಗಿ ಶುಭಹಾರೈಸಿದರು.