

ಹಿರಿಯೂರು:
ಕರ್ನಾಟಕ ಸರ್ಕಾರವು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮುಖಾಂತರ ರಾಜ್ಯದಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಂಡಿದ್ದು, ಗಣತಿದಾರರು ನಿಮ್ಮ ಮನೆಗೆ ಬಂದಾಗ ಕುಂಚಿಟಿಗ ಸಮುದಾಯದ ನಾವುಗಳು ಮಾಹಿತಿ ನೀಡುವ ಸಂದರ್ಭದಲ್ಲಿ ಧರ್ಮಎಂಬ ಕಲಂನಲ್ಲಿ ಹಿಂದೂ ಎಂದು ಹಾಗೂ ಜಾತಿ ಎಂಬ ಕಲಂನಲ್ಲಿ ಒಕ್ಕಲಿಗ(ಎ-1541) ಎಂದು, ಉಪಜಾತಿ ಕಾಲಂನಲ್ಲಿ ಕುಂಚಿಟಿಗ (ಎ-0795)ನಮೂದಿಸಬೇಕು ಎಂಬುದಾಗಿ ಕರ್ನಾಟಕ ರಾಜ್ಯ ಕುಂಚಿಟಿಗ-ಒಕ್ಕಲಿಗ ಸಂಘ(ರಿ) ಸಮಾಜದ ಗೌರವಾಧ್ಯಕ್ಷರಾದ ಎ.ಆರ್.ಶ್ರೀನಿವಾಸಯ್ಯ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಈ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲು ಗಣತಿದಾರರು ನಿಮ್ಮ ಮನೆಗೆ ಬಂದಾಗ ಕುಂಚಿಟಿಗ ಸಮುದಾಯದವರು ಮಾಹಿತಿ ನೀಡುವ ಸಂದರ್ಭದಲ್ಲಿ ಧರ್ಮವನ್ನು “ಹಿಂದೂ” ಎಂದು ಹಾಗೂ ನಿಮ್ಮ ಜಾತಿಯನ್ನು ಒಕ್ಕಲಿಗ(ಎ.1541) ಎಂದು, ಉಪಜಾತಿಯನ್ನು ಕುಂಚಿಟಿಗ (ಎ-0795) ಎಂದು ಬರೆಯಿಸಬೇಕು ಎಂಬುದಾಗಿ ಕುಂಚಿಟಿಗ ಸಮಾಜದ ಗೌರವಾಧ್ಯಕ್ಷರಾದ ಎ.ಆರ್.ಶ್ರೀನಿವಾಸಯ್ಯ ಅವರು ಸಮಾಜದ ಬಾಂಧವರಲ್ಲಿ ಮನವಿ ಮಾಡಿದ್ದಾರೆ.