

ಹಿರಿಯೂರು:
ಕೆ. ಎಸ್. ಆರ್. ಟಿ. ಸಿ. ಬಸ್ ಸ್ಟ್ಯಾಂಡ್ ಮುಂಭಾಗ ಆಟೋ ನಿಲ್ದಾಣ ಹತ್ತಿರ ರಸ್ತೆ ಪಕ್ಕದಲ್ಲಿ ಭಾರತೀಯ ದಲಿತ ಸಂಘರ್ಷ ಸಮಿತಿ ಸಂಘಟನೆಯ ಆಟೋ ಘಟಕ ಉದ್ಘಾಟನೆ ಮಾಡಿ ಅಂಬೇಡ್ಕರ್ ರವರ ಭಾವಚಿತ್ರವಿರುವ ನಾಮಫಲಕವನ್ನು ಹಾಕಿದ್ದು ನಾಮಫಲಕದಿಂದ ಸಾರ್ವಜನಿಕರಿಗೆ ಆಗಲಿ ಅಥವಾ ವಾಹನ ಸಂಚಾರಕ್ಕೆ ಆಗಲಿ ಯಾವುದಕ್ಕೂ ಕೂಡ ತೊಂದರೆ ಆಗುತ್ತಿರಲಿಲ್ಲ.
ಆದರೂ ಕೂಡ ದಲಿತ ಅಂಬೇಡ್ಕರ್ ವಿರೋಧಿ ಆಗಿರುವಂತ ಕೆ.ಎಸ್.ಆರ್.ಟಿ.ಸಿ ಅಧಿಕಾರಿ ಹಾಗೂ ಇತರ ಡ್ರೈವರ್ ಗಳು ಸೇರಿ ಏಕಾಏಕಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಹಾಗೂ ದಲಿತ ಸಂಘಟನೆಗೆ ಅವಮಾನ ಮಾಡಿ ಸಂಘಟನೆಯ ನಾಮಪಲಕವನ್ನು ಕಿತ್ತು ಹಾಕಿರುತ್ತಾರೆ.
ಆದ್ದರಿಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಇವರನ್ನು ವೃತ್ತಿಯಿಂದ ಅಮಾನತುಗೊಳಿಸಬೇಕು ಮತ್ತು ನಾಮಫಲಕವನ್ನು ಇದ್ದ ಜಾಗದಲ್ಲೇ ಗೌರವಾನ್ವಿತವಾಗಿ ಕಿತ್ತ ಜಾಗಕ್ಕೆ ಹಾಕಿಸಿ ಕೊಡಬೇಕು ಎಂದು ಭಾರತೀಯ ದಲಿತ ಸಂಘರ್ಷ ಸಮಿತಿ ವತಿಯಿಂದ ಒತ್ತಾಯಿಸಿದರು.
ಒಂದು ವೇಳೆ ನಾಮಫಲಕವನ್ನು ಕಿತ್ತಜಾಗದಲ್ಲೇ ಗೌರವಾನ್ವಿತವಾಗಿ ಹಾಕಿಸದೆ ನಾಮಫಲಕವನ್ನು ಕಿತ್ತವರ ಮೇಲೆ ಪ್ರಕರಣ ದಾಖಲಿಸದೆ, ಅವರನ್ನು ಅಮಾನತುಗೊಳಿಸದೆ ಹೋದಲ್ಲಿ ಮುಂದಿನ ಹೋರಾಟಗಳು ಅನಿರ್ಧಿಷ್ಟ ಅವಧಿ ಧರಣಿ ಸತ್ಯಾಗ್ರಹ, ರಸ್ತೆತಡೆ ಕಾರ್ಯಕ್ರಮ ಹಾಗೂ ಕೆ.ಎಸ್.ಆರ್.ಟಿ.ಸಿ. ಜಿಲ್ಲಾಧಿಕಾರಿಯ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಇನ್ನು ಮುಂತಾದ ಉಗ್ರ ಹೋರಾಟ ಮಾಡಬೇಕಾಗುತ್ತದೆ.
ಸಾಂಕೇತಿಕ ಧರಣಿ ಸತ್ಯಾಗ್ರಹದ ಮೂಲಕ ಮಾನ್ಯ ತಹಶೀಲ್ದಾರ್ ಗೆ ಹಾಗೂ ಕೆ. ಎಸ್. ಆರ್. ಟಿ. ಸಿ. ಯ ಡಿ. ಟಿ. ಓ. ಬಸವರಾಜು ಚಿತ್ರದುರ್ಗ ಇವರು ಧರಣಿ ಸ್ಥಳಕ್ಕೆ ಬಂದು ಬಿ.ಡಿ.ಎಸ್.ಎಸ್..ಸಂಘಟನೆಯ ಕಾರ್ಯಕರ್ತರಲ್ಲಿ ಮನವಿ ಮಾಡಿ ತಿಳಿಯದೆ ತಪ್ಪು ಮಾಡಿದ್ದಾರೆ ಸಂಘಟನೆಯ ನಾಮಫಲಕವನ್ನು ಮರುಸ್ಥಾಪನೆ ಮಾಡಿಸಿ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ನಿಯಂತ್ರಣ ಅಧಿಕಾರಿ ಹಾಗೂ ಡ್ರೈವರ್ ಗಳ ಮೇಲೆ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆಕೊಟ್ಟರು.
ಇನ್ನು ಮುಂದೆ ಈ ತರಹದ ಘಟನೆಗಳು ಆಗದಂತೆ ನೋಡಿಕೊಳ್ಳೋತ್ತೇವೆ.ಆಟೋ ಚಾಲಕರು ಕಾಕಿ ಹಾಕಿದರೆ ನಮ್ಮ ಕೆ.ಎಸ್.ಆರ್.ಟಿ.ಸಿ. ಯವರು ಕೂಡ ಕಾಕಿ ಹಾಕಿ ಕೆಲಸ ಮಾಡೋದು ಇಬ್ಬರ ಕೆಲಸ ಸಾರ್ವಜನಿಕರದೇ ಒಬ್ಬರಿಗೊಬ್ಬರು ಒಳ್ಳೆತನದಲ್ಲಿ ಹೋಗಬೇಕು ಎಂಬುದಾಗಿ ಪ್ರತಿಭಟನಾಕಾರರಿಗೆ ಸಮಾಧಾನ ಹೇಳಿದರು.
ಸಂಘಟನೆಯ ಸಹಕಾರ ಕೂಡ ನಮಗೆ ಬೇಕಾಗುತ್ತದೆ. ನಿಮಗೆ ನಾವು ಕೂಡ ಗೌರವ ಕೊಡುತ್ತೇವೆ. ಬಾಬಾಸಾಹೇಬರು ಸಂವಿಧಾನ ಬರೆದಂಥ ಸಂವಿಧಾನದಡಿಯಲ್ಲಿ ನಾವು ಕೂಡ ಕೆಲಸ ಮಾಡುತ್ತಿದ್ದೇವೆ. ಅವರಿಗೆ ನಾವು ನೀವೂ ಎಲ್ಲರು ಈ ದೇಶದ ಪ್ರತಿಯೊಬ್ಬ ನಾಗರೀಕ ಕೂಡ ಗೌರವ ಕೊಡಲೇಬೇಕು ಎಂಬುದಾಗಿ ಹೇಳಿದರು.
ಧರಣಿ ನಿರತರ ಮನವೊಲಿಸಿ ಧರಣಿಯನ್ನು ಹಿಂಪಡೆಯುವಂತೆ ಮನವಿ ಮಾಡಿದರು.ನಂತರ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿ ಧರಣಿ ಸತ್ಯಾಗ್ರಹ ವನ್ನು ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಧ್ಯಕ್ಷರು ಕೆ.ತಿಮ್ಮರಾಜು ಹಾಗೂ ರಾಜ್ಯ ಉಪಾಧ್ಯಕ್ಷರಾದ ಚಂದ್ರಪ್ಪಘಾಟ್, ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಎಳನೀರು ಕ್ರಿಸ್ತಘಟಕ ರಾಜ್ಯಾಧ್ಯಕ್ಷರಾದ ರಂಗಸ್ವಾಮಿ ಜೇಮ್ಸ್, ಮಹಾ ನಾಯಕ ದಲಿತ ಸೇನೆ ರಾಜ್ಯ ಸಂಘಟನೆ ಕಾರ್ಯದರ್ಶಿ ರವಿಘಾಟ್, ಡಿ.ಎಸ್.ಎಸ್.( ಅಂಬೇಡ್ಕರ್ ವಾದ) ಬೋರನಕುಂಟೆಜೀವೇಶ್, ಯುವಘಟಕ ಜಿಲ್ಲಾಧ್ಯಕ್ಷರಾದ ಯಶೋಧರ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಮೋಹನ್ ಕುಮಾರ್, ತಾಲ್ಲೂಕು ಅಧ್ಯಕ್ಷರಾದ ಎಸ್.ಚಿದಾನಂದ್ (ಉಡುವಳ್ಳಿ), ಯುವ ಘಟಕ ತಾಲ್ಲೂಕು ಅಧ್ಯಕ್ಷರಾದ ಸಿದ್ದಾರ್ಥ್, ಕಾರ್ಮಿಕ ಘಟಕ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಹಿಂದುಳಿದವರ್ಗ ತಾಲ್ಲೂಕು ಅಧ್ಯಕ್ಷ ವೆಂಕಟೇಶ್ ಪಿಲಾಜನಹಳ್ಳಿ, ಗೂಡ್ಸ್ ಚಾಲಕರ ತಾಲ್ಲೂಕ್ ಅಧ್ಯಕ್ಷ ಲಿಂಗರಾಜ್, ಎಸ್.ಟಿ. ಘಟಕ ತಾಲ್ಲೂಕು ಅಧ್ಯಕ್ಷ ಹರೀಶ್, (3ಚಕ್ರ ವಾಹನ) ಆಟೋ ಘಟಕ ತಾಲ್ಲೂಕು ಅಧ್ಯಕ್ಷ ಮಧುಹುಲಗುಲಕುಂಟೆ, ಯುವ ಘಟಕ ತಾಲ್ಲೂಕು ಕಾರ್ಯಾಧ್ಯಕ್ಷ ಶಿವಲಿಂಗ, ತಾಲ್ಲೂಕು ಕಾರ್ಯದರ್ಶಿ ರಂಗನಾಥ್, ಸೋಮೇರಳ್ಳಿ ಹಾಗೂ ತಾಲ್ಲೂಕು ಉಪಾಧ್ಯಕ್ಷ ದಾಸಣ್ಣ, ತಾಲ್ಲೂಕು ಯುವ ಘಟಕ ಉಪಾಧ್ಯಕ್ಷ ಚಂದ್ರು ಹಾಗೂ ಸಂಘಟನೆಯಪದಾಧಿಕಾರಿಗಳು, ಆಟೋಚಾಲಕರು ಸೇರಿದಂತೆ ಅನೇಕರು ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.