

ಹಿರಿಯೂರು:
ನಗರದ ಶಕ್ತಿಗಣಪತಿ ಶೋಭಾಯಾತ್ರೆಗೆ ಆಗಮಿಸಿದ್ದಂತಹ ಸಾವಿರಾರು ಭಕ್ತಾಧಿಗಳಿಗೆ ಅನ್ನದಾಸೋಹದ ವ್ಯವಸ್ಥೆಯನ್ನು ಶ್ರೀವಾಗ್ದೇವಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಕೆ.ವಿ.ಅಮರೇಶ್ ಮಾಡಿದ್ದರು.

ಈ ವೇಳೆ ಶ್ರೀವಾಗ್ದೇವಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಕೆ.ವಿ.ಅಮರೇಶ್ ಅವರು ತಮ್ಮ ತಂದೆ-ತಾಯಿ ಜ್ಞಾಪಕಾರ್ಥವಾಗಿ ಲಾಡು, ಸಿಹಿಪೊಂಗಲ್, ಮೊಸರನ್ನ, ಚಿತ್ರನ್ನವನ್ನೊಳಗೊಂಡ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಮಾಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.