October 6, 2025
000007

ಹಿರಿಯೂರು:

ನಗರದ ವಿವಿಧ ವಾರ್ಡ್ ಗಳಲ್ಲಿ ಸ್ವಚ್ಛತಾಸೇವಾ ಕಾರ್ಯಕ್ರಮದಡಿ ಸ್ವಚ್ಛತೆ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿದ್ದು, ನಗರದ ಸ್ವಚ್ಛತೆ ಹಾಗೂ ಸೌಂದರ್ಯವನ್ನು ಕಾಪಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂಬುದಾಗಿ ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣ ಹೇಳಿದರು.

ನಗರದ ವಾರ್ಡ್ ನಂಬರ್.28ರ ರಾಷ್ಟ್ರೀಯ ಅಕಾಡೆಮಿ ಸ್ಕೂಲ್ ಹಿಂಭಾಗದ ಪಾರ್ಕ್ ನಲ್ಲಿ ನಗರಸಭೆ ವತಿಯಿಂದ ನಗರವ್ಯಾಪ್ತಿಯಲ್ಲಿನ ವಾರ್ಡ್ ಗಳಲ್ಲಿ ಸ್ವಚ್ಛತಾಸೇವಾ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಈ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣ, ಉಪಾಧ್ಯಕ್ಷರಾದ ಶ್ರೀಮತಿ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಎಂ.ಡಿ.ಸಣ್ಣಪ್ಪ, ಶ್ರೀಮತಿ ಮಮತ ಮತ್ತು ವಾರ್ಡ್ ನ ಸದಸ್ಯರಾದ ಶ್ರೀಮತಿ ಅಂಬಿಕಾಆರಾಧ್ಯ, ಪೌರಾಯುಕ್ತರಾದ ಎ.ವಾಸೀಂ,  ಜೊತೆಗೂಡಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಆರೋಗ್ಯ ನಿರೀಕ್ಷಕರು, ಧಫೆದಾರ್ ಗಳ ಸಮ್ಮುಖದಲ್ಲಿ ಪೌರಕಾರ್ಮಿಕರು ಪಾರ್ಕ್ ಸ್ವಚ್ಛತೆ ಕಾರ್ಯವನ್ನು ಪೂರ್ಣಗೊಳಿಸಿದರು.

About The Author

Leave a Reply

Your email address will not be published. Required fields are marked *