

ಹಿರಿಯೂರು:
ತಾಲ್ಲೂಕಿನ ಮದ್ದಿಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಪತ್ನಿಯೇ ಪ್ರಿಯಕರನ ಜೊತೆಗೂಡಿ ಪತಿಯನ್ನೇ ಕೊಂದು ಜಮೀನಿನಲ್ಲಿ ಹೂತ್ತಿಟ್ಟಿರುವ ಪ್ರಕರಣವನ್ನು ಅಬ್ಬಿನಹೊಳೆ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ಹಾಗೂ ಸಿಬ್ಬಂದಿ ಅವರ ಸೂಕ್ಷ್ಮ ವಿಚಾರಣೆ ಮತ್ತು ಮಿಂಚಿನ ಕಾರ್ಯಾಚರಣೆ ಬಯಲಿಗೆಳೆದಿದೆ.
ಮೃತರು ಬಾಲಣ್ಣ (52). ಪತ್ನಿ ಮಮತ ಹಾಗೂ ಆಂಧ್ರ ಮೂಲದ ಗುತ್ತಿಗೆದಾರ ಮೂರ್ತಿ ಆರೋಪಿಗಳಾಗಿ ಬಂಧಿತರಾಗಿದ್ದಾರೆ.
ಮೊದಲು ಗಂಡ ಕಾಣೆಯಾಗಿದ್ದಾನೆಂದು ದೂರು ನೀಡಿದ ಮಮತ, ತನಿಖೆ ವೇಳೆ ಶಂಕೆ ಮೂಡುತ್ತಿದ್ದಂತೆಯೇ ಪೊಲೀಸರು ನಿಖರ ವಿಚಾರಣೆ ನಡೆಸಿದರು. ಕೊನೆಗೆ ಆರೋಪಿಯೇ ಬಾಯಿಬಿಟ್ಟಿದ್ದು, ಶವವನ್ನು ಜಮೀನಿನಲ್ಲಿ ಪತ್ತೆಹಚ್ಚಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಕುಟುಂಬ ಕಲಹ ಮತ್ತು ಅಕ್ರಮ ಸಂಬಂಧವೇ ಕೊಲೆಗೆ ಕಾರಣ. ಸೆಪ್ಟೆಂಬರ್ 20ರಂದು ರಾತ್ರಿ ಮನೆಯಿಂದ ಹೊರಗೆ ಮಲಗಿದ್ದ ಬಾಲಣ್ಣನನ್ನು ಕಬ್ಬಿಣದ ರಾಡಿನಿಂದ ಹೊಡೆದು ಕೊಂದು, ಬೆಡ್ ಶೀಟ್ ನಲ್ಲಿ ಸುತ್ತಿ ಜಮೀನಿನಲ್ಲಿ ಹೂಳಲಾಗಿತ್ತು. ಪತ್ನಿ ಮಮತ ಮತ್ತು ಪ್ರಿಯಕರ ಮೂರ್ತಿ ಇಬ್ಬರೂ ಪೊಲೀಸ್ ವಶದಲ್ಲಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.