

ಹಿರಿಯೂರು :
ರಾಜ್ಯ ಸರ್ಕಾರದ ವತಿಯಿಂದ ಸೆಪ್ಟಂಬರ್ 22ರಿಂದ ಅಕ್ಟೋಬರ್ 07 ರವರೆಗೆ ನಡೆಯುತ್ತಿರುವ ಸಾಮಾಜಿಕ ಹಾಗೂ ಶ್ಯೆಕ್ಷಣಿಕ ಸಮೀಕ್ಷೆಯಲ್ಲಿ ಒಕ್ಕಲಿಗ ಸಮುದಾಯದವರು ಧರ್ಮದ ಕಾಲಂನಲ್ಲಿ “ಹಿಂದೂ” ಎಂದು ಜಾತಿಕಾಲಂ ನಲ್ಲಿ ಓಕ್ಕಲಿಗ-1541, ಎಂದು ನಮೂದಿಸಬೇಕು ಎಂಬುದಾಗಿ ಪಟ್ಟನಾಯಕನಹಳ್ಳಿ ಸ್ಫಟಿಕಪುರಿ ಮಹಾಸಂಸ್ಥಾನ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ.ನಂಜಾವಧೂತ ಮಹಾಸ್ವಾಮೀಜಿಯವರು ಹೇಳಿದರು.
ಉಪಜಾತಿ ಕಾಲಂನಲ್ಲಿ ಓಕ್ಕಲಿಗ ಎಂದು ಅಥವಾ ಉಪಜಾತಿ ಪ್ರಮಾಣಪತ್ರ ಹೊಂದಿರುವವರು/ತಮ್ಮಉಪಜಾತಿ ಬರೆಸಲು ಇಚ್ಚಿಸುವವರು ತಮ್ಮ ಉಪಜಾತಿಯನ್ನು ಹಾಗೂ ಕುಲಕಸುಬು-ಕೃಷಿ ಸಾಗುವಳಿ ಎಂದು ನಮೂದಿಸುವ ಮೂಲಕ ಸಮುದಾಯದ ಒಗ್ಗಟ್ಟು ಪ್ರದರ್ಶನ ಮಾಡಬೇಕು,
ಇದರಿಂದ ಜನಸಂಖ್ಯೆಗೆ ಹಾಗೂ ನಮ್ಮ ಸಾಮಾಜಿಕ, ಆರ್ಥಿಕ ಹಾಗೂ ಶ್ಯೆಕ್ಷಣಿಕ ಮಟ್ಟಕ್ಕೆ ಅನುಗುಣವಾಗಿ ಮೀಸಲಾತಿ, ಸವಲತ್ತು ಹಾಗು ರಾಜಕೀಯ ಪ್ರಾತಿನಿಧ್ಯ ಪಡೆಯಲು ಅನುಕೂಲವಾಗುತ್ತದೆ. ಸಮುದಾಯದ ಪ್ರತಿಯೊಬ್ಬರು ಸಹ ಯಾವುದೇ ಗೊಂದಲಕ್ಕೆ ಒಳಗಾಗದೆ ಸಮೀಕ್ಷೆಯಲ್ಲಿ ಸ್ವ-ಇಚ್ಚೆಯಿಂದ, ಭಾಗವಹಿಸಬೇಕು ಎಂಬುದಾಗಿ ಅವರು ತಿಳಿಸಿದ್ದಾರೆ.