

ಹಿರಿಯೂರು:
ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿಗಣತಿ ಸಮೀಕ್ಷೆಯ ಕುರಿತು ಚರ್ಚಿಸಿ, ನಮ್ಮ ಸಮುದಾಯದ ಜಾತಿಗಣತಿ ಪಟ್ಟಿಯಲ್ಲಿ ಪ್ರಕಟವಾಗಿರುವ ಕಾಲಂ ಸಂಖ್ಯೆ “ಎ-0726” ಕೊಂಗುವೆಳ್ಳಾಳರ್ ಎಂದು ನಮೂದು ಮಾಡಬೇಕು ಎಂಬುದಾಗಿ ಕೊಂಗುವೆಲ್ಲಾಲಗೌಂಡರ್ ಸೇವಾ ಸಂಘದ ಅಧ್ಯಕ್ಷರಾದ ಸಿ.ಎನ್. ಸುಂದರಂ ಹೇಳಿದರು.
ನಗರದ ತನ್ಯಾಸಿಗೌಂಡರ್ ಕಲ್ಯಾಣ ಮಂಟಪದಲ್ಲಿ ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿಗಣತಿ ಸಮೀಕ್ಷೆಯ ಕುರಿತು ಚರ್ಚಿಸಲು ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರುಗಳಿಗೆ ಕರೆಯಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆದ್ದರಿಂದ ಕರ್ನಾಟಕ ರಾಜ್ಯದಾದ್ಯಂತ ವಾಸವಾಗಿರುವ ನಮ್ಮ ಕೊಂಗುವೆಳ್ಳಾಳರ್ ಜನಾಂಗದ ಬಾಂಧವರಲ್ಲಿ ಜಾತಿಗಣತಿಯಲ್ಲಿ ಕಾಲಂ ಸಂಖ್ಯೆ “ಎ-0726” ಕೊಂಗುವೆಳ್ಳಾಳರ್ ಎಂದು ಒಂದೇ ರೀತಿ ಬರೆಸಿಕೊಳ್ಳಬೇಕು ಎಂಬುದಾಗಿ ಅವರು ಮನವಿ ಮಾಡಿದರು.
ಈ ಸಭೆಯಲ್ಲಿ ಬೆಂಗಳೂರಿನ ಕೊಂಗುವೆಳ್ಳಾಳ ಸಂಘದ ಅಧ್ಯಕ್ಷರಾದ ಮೋಹನ್ ಅವರು ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಭದ್ರಾವತಿ ಸಂಘ, ಹೊಸಪೇಟೆ ಸಂಘ, ಮೈಸೂರು ಸಂಘ, ಚಾಮರಾಜನಗರ ಸಂಘ, ದಾವಣಗೆರೆ ಸಂಘ, ಹೆಚ್.ಡಿ.ಕೋಟೆ ಸಂಘ, ತುಮಕೂರು ಸಂಘದ ಪದಾಧಿಕಾರಿಗಳು, ಹಿರಿಯೂರಿನ ಕೊಂಗುವೆಲ್ಲಾಲಗೌಂಡರ್ ಸೇವಾ ಸಂಘದ ಅಧ್ಯಕ್ಷರಾದ ಸಿ.ಎನ್.ಸುಂದರಂ, ಕೊಂಗುವೆಲ್ಲಾಲಗೌಂಡರ್ ಸೇವಾ ಸಂಘದ ಕಾರ್ಯದರ್ಶಿ ಎಂ.ಶಕ್ತಿವೇಲು, ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.