
ಹಿರಿಯೂರು:
ಶ್ರೀಕೆಂಪೇಗೌಡ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ.3.30 ಕೋಟಿ ವಹಿವಾಟು ನಡೆಸಿದ್ದು, ರೂ.78.210.ಲಕ್ಷ ಲಾಭವನ್ನು ಗಳಿಸಿದ್ದು, ಸಹಕಾರ ಸಂಘವನ್ನು ನಂಬಿಕೆ ಪ್ರಮಾಣಿಕತೆಯಿಂದ ನಡೆಸಿದಲ್ಲಿ ಮಾತ್ರ ಉಳಿಯುತ್ತವೆ ಎಂಬುದಾಗಿ ಶ್ರೀಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಜಗದೀಶಕಂದಿಕೆರೆ ಅವರು ಹೇಳಿದರು.
ನಗರದ ಶ್ರೀ ಕೆಂಪೇಗೌಡ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶ್ರೀಕೆಂಪೇಗೌಡ ಪತ್ತಿನ ಸಹಕಾರ ಸಂಘದಲ್ಲಿ ಸರ್ಕಾರದ ಮತ್ತು ಸಹಕಾರ ಸಂಘದ ಅಧಿನಿಯಮಗಳ ಪ್ರಕಾರ ಭದ್ರತಾ ಠೇವಣಿ ಇಡಲಾಗಿದೆ. ಷೇರುದಾರ ಸದಸ್ಯರು ಸಂಘದಲ್ಲಿ ಠೇವಣಿ ಮಾಡುವುದರ ಜೊತೆಗೆ ವಹಿವಾಟು ನಡೆಸುವಂತೆ ಸದಸ್ಯರಲ್ಲಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಶ್ರೀ ಕೆಂಪೇಗೌಡ ಪತ್ತಿನ ಸಹಕಾರ ಸಂಘದ ವತಿಯಿಂದ ಎಲ್ಲಾ ಸಮುದಾಯದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಮಕ್ಕಳಿಗೆ ಪ್ರತಿಭಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಕುರಿತು ಮಾತನಾಡಿದ ಅವರು ಮಕ್ಕಳಿಗೆ ಮುಂದಿನ ನಿಮ್ಮ ಭವಿಷ್ಯ ಉಜ್ವಲವಾಗಲಿ ನಿಮ್ಮ ಇಚ್ಚೆಯಂತೆ ಯಶಸ್ಸು ಉತ್ತುಂಗದ ಸ್ಥಾನಕ್ಕೆ ಹೋಗುವ ಶಕ್ತಿಯನ್ನು ಭಗವಂತ ನಿಮಗೆ ನೀಡಲಿ ಎಂಬುದಾಗಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಶ್ರೀ ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಮುಖ್ಯ ಪ್ರಭಾರ ಕಾರ್ಯದರ್ಶಿ ಶ್ರೀಮತಿ ಎ.ಬಿ.ರಾಣಿ ಅವರು ಆರ್ಥಿಕ ತಃಖ್ತೆ ಓದಿ, ಸಂಘದ ಅಜೆಂಡಾ ಚರ್ಚೆ ವಿಷಯಗಳನ್ನು ಓದಿ ಅನುಮೋದನೆ ಪಡೆದರು.

ಈ ಸಭೆಯಲ್ಲಿ ಸಂಘದ ನಿರ್ದೇಶಕರಾದ ವಿ.ಮನ್ಮಥ, ವಕೀಲರಾದ ಸಿ. ಶಿವಕುಮಾರ್ , ಎಂ.ಎಸ್.ಮಹಾಲಿಂಗಯ್ಯ, ವಿ.ಕಲ್ಪನಾ, ಹೆಚ್.ಎಸ್. ಶಾಂತರಾಜಯ್ಯ, ಎನ್.ರಾಧಾಕೃಷ್ಣ , ಜೆ. ಕುಮಾರಸ್ವಾಮಿ, ಕೆ.ವಿ. ದಯಾನಂದ, ಜೆ.ಆರ್. ಅಜಯ್ ಕುಮಾರ್, ಮನವಿ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಮಾನಸಮಂಜುನಾಥ್, ಟಿ. ಕೃಷ್ಣಮೂರ್ತಿ ಸೇರಿದಂತೆ ಎಲ್ಲಾ ಸದಸ್ಯರುಗಳು ಉಪಸ್ಥಿತಿಯಲ್ಲಿದ್ದರು.