March 4, 2026
00006

ಹಿರಿಯೂರು :

ವಾಣಿವಿಲಾಸ ಪತ್ತಿನ ಸಹಕಾರ ಸಂಘವು ಪ್ರಸ್ತುತ ಸಾಲಿನಲ್ಲಿ 14ಕೋಟಿ 32ಲಕ್ಷ 08 ಸಾವಿರದ 839 ರೂಗಳ ವಹಿವಾಟು ನಡೆಸಿದ್ದು, ಸಂಘದ ದುಡಿಯುವ ಬಂಡವಾಳ 2 ಕೋಟಿ 89 ಲಕ್ಷದ 61 ಸಾವಿರದ 082 ರೂಗಳಿದ್ದು, ಈ ಸಾಲಿನಲ್ಲಿ 8 ಲಕ್ಷ 67 ಸಾವಿರದ 404 ರೂ.ಗಳ ನಿವ್ವಳ ಲಾಭಗಳಿಸಿ ಪ್ರಗತಿಯ ಹಾದಿಯಲ್ಲಿ ಸಾಗಿದೆ ಎಂಬುದಾಗಿ ವಾಣಿವಿಲಾಸ ಪತ್ತಿನ ಸಹಾಕಾರ ಸಂಘದ ಅಧ್ಯಕ್ಷರಾದ ಆಲೂರು ಹನುಮಂತರಾಯಪ್ಪ ಹೇಳಿದರು.

ನಗರದ ನೆಹರು ಕ್ರೀಡಾಂಗಣದಲ್ಲಿನ ವಾಣಿವಿಲಾಸ ವಿದ್ಯಾಸಂಸ್ಥೆಯ “ವಾಣಿವಿಲಾಸ ಸಭಾಂಗಣ”ದಲ್ಲಿ ಏರ್ಪಡಿಸಲಾಗಿದ್ದ ವಾಣಿವಿಲಾಸ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ನಮ್ಮ ಸಹಕಾರ ಸಂಘ ಕಳೆದ 25 ವರ್ಷಗಳಲ್ಲಿ ಗ್ರಾಹಕರ ಮೇಲೆ ಯಾವುದೇ ರೀತಿಯ ದಾವೆಗಳಾಗಲಿ, ಮೊಕ್ಕದ್ದಮ್ಮೆಗಳಾಗಲಿ ದಾಖಲಿಸದೆ ಸಾಲ ವಸೂಲಿ ಮಾಡಲಾಗಿದ್ದು, ಸಂಘದ ಎನ್.ಪಿ.ಎ ಅಂದರೆ ವಸೂಲಿಯಾಗದ ಸಾಲಗಳು ಜೀರೋ ಪರ್ಸೆಂಟ್ ನಲ್ಲಿದ್ದು ಜಿಲ್ಲೆಯಲ್ಲಿಯೇ ಒಂದು ಉತ್ತಮ ಸಹಕಾರ ಸಂಘವಾಗಿದೆ ಎನ್ನಬಹುದಾಗಿದ್ದು,

ಇದಕ್ಕೆಲ್ಲಾ ಕಾರಣವೆಂದರೆ ನಮ್ಮ ಸಹಕಾರ ಸಂಘ ಉತ್ತಮ ಷೇರು ಸದಸ್ಯರು ಹಾಗೂ ಉತ್ತಮ ಗ್ರಾಹಕರನ್ನು ಹೊಂದಿದ್ದು, ಯಾವುದೇ ಸಹಕಾರ ಸಂಘ ಯಶಸ್ಸಿನ ಹಾದಿಯಲ್ಲಿ ಸಾಗಬೇಕಾದರೆ ಉತ್ತಮ ಆಡಳಿತ ಮಂಡಳಿ, ಉತ್ತಮ ಸಿಬ್ಬಂದಿ ಹಾಗೂ ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ಉತ್ತಮ ಗ್ರಾಹಕರನ್ನು ಹೊಂದಿರಬೇಕು ಎಂಬುದಾಗಿ ಅವರು ಹೇಳಿದರು.

ವಾರ್ಷಿಕ ಮಹಾಸಭೆಯ ನೋಟಿಸ್ ಅನ್ನು ಸಂಘದ ಉಪಾಧ್ಯಕ್ಷ ಪಿ.ಆರ್.ಸತೀಶ್ ಬಾಬು ಸಭೆಯಲ್ಲಿ ಓದಿದರು, ಸಂಘದ ಆಡಳಿತ ಮಂಡಳಿ ವರದಿಯನ್ನು ನಿರ್ದೇಶಕ ಆರ್.ವಸಂತ್ ಕುಮಾರ್ ಸಭೆಗೆ ತಿಳಿಸಿದರು. 2025-26ನೇ ಸಾಲಿನ ಅಂದಾಜು ಆಯವ್ಯಯವನ್ನು ನಿರ್ದೇಶಕ ಟಿ.ಮಲ್ಲೇಶಪ್ಪ ಸಭೆಯಲ್ಲಿ ಮಂಡಿಸಿದರು. ಆನಂತರ ಸಂಘದ ವ್ಯವಸ್ಥಾಪಕಿ ಶ್ರೀಮತಿ ನಂದಿನಿ ಹಾಗೂ ಲೇಖಪಾಲಕ ಶಿವರಾಜ್ ರವರು 2024-25ನೇ ಸಾಲಿನ ಜಮಾ ಖರ್ಚು ಹಾಗೂ ಲಾಭ ನಷ್ಟದ ತಃಖ್ತೆಯನ್ನು ಸಭೆಗೆ ಮಂಡಿಸಿ, ಅನುಮೋದನೆ ಪಡೆಯಲಾಯಿತು.

ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರುಗಳಾದ ಜಿ.ಪಂ.ಮಾಜಿ ಅಧ್ಯಕ್ಷ ಬಿ.ಎಸ್.ರಘುನಾಥ್, ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರ್ ರಾಜ್, ಪ್ರೋ.ಬಿ.ಕೆ.ನಾಗಣ್ಣ, ಹೆಚ್.ಎಸ್.ಜೋಗಪ್ಪ, ಸಣ್ಣಭೀಮಣ್ಣ, ರೆಡ್ ಕ್ರಾಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾರಾಧಾಕೃಷ್ಣ, ಅಂಬಿಕಾ, ಚಂದ್ರವದನ, ಸತ್ಯಂರಾಧಾಕೃಷ್ಣ, ಪತ್ರಕರ್ತ ಎಂ.ಎಲ್.ಗಿರಿಧರ್, ಕೃಷಿಕರುಗಳಾದ ಹುಲಿಯಪ್ಪ, ಶಿವಲಿಂಗಪ್ಪ, ದಾಸಪ್ಪ, ಕೃಷ್ಣಮೂರ್ತಿ, ಕವಿತಾ ಕೃಷ್ಣಮೂರ್ತಿ, ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಳೆದ 2024-2025ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಸಂಘದಲ್ಲಿ ಅತಿಹೆಚ್ಚಿನ ವ್ಯವಹಾರ ಮಾಡಿದಂತಹ ಗ್ರಾಹಕರುಗಳನ್ನು ಹಾಗೂ ಸಂಘದಲ್ಲಿ ಠೇವಣಿ ಮಾಡಿದಂತಹ ಹೂಡಿಕೆದಾರ ಸದಸ್ಯರುಗಳನ್ನು ಮತ್ತು ಸಂಘದಲ್ಲಿ ಸಾಲಸೌಲಭ್ಯ ಪಡೆದು, ಪ್ರಾಮಾಣಿಕವಾಗಿ ಸಂಘಕ್ಕೆ ಸಾಲ ಮರುಪಾವತಿ ಮಾಡಿರುವ ಸಂಘದ ಸದಸ್ಯರುಗಳನ್ನು ಶಾಲು ಹೊದಿಸಿ, ಪುಷ್ಪಮಾಲೆ, ಹಾಕಿ ಸನ್ಮಾನಿಸಿ, ಅಭಿನಂದಿಸಲಾಯಿತು.

ಈ ವೇದಿಕೆಯಲ್ಲಿ ವಾಣಿವಿಲಾಸ ಪತ್ತಿನ ಸಹಕಾರಸಂಘದ ಉಪಾಧ್ಯಕ್ಷರಾದ ಪಿ.ಆರ್.ಸತೀಶ್ ಬಾಬು, ಹಾಗೂ ನಿರ್ದೇಶಕರುಗಳಾದ ಟಿ.ಮಲ್ಲೇಶಪ್ಪ, ಎಚ್. ನಟರಾಜ್, ಆರ್. ವಸಂತ್ ಕುಮಾರ್, ಎಂ.ಜಯರಾಮಪ್ಪ, ಹೆಚ್.ಡೀಶಪ್ಪ, ಎಸ್.ಮೂರುಕಣ್ಣಪ್ಪ, ಶ್ರೀಮತಿ ಸ್ವರೂಪರಾಣಿ, ಶ್ರೀಮತಿ ಟಿ.ಪ್ರೇಮಲತ ಇವರುಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ವಾಣಿ ವಿಲಾಸ ವಿದ್ಯಾಸಂಸ್ಥೆ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ.ಎಸ್. ರಘುನಾಥ್, ವಾಣಿವಿಲಾಸಪತ್ತಿನ ಸಹಕಾರಸಂಘದ ವ್ಯವಸ್ಥಾಪಕರಾದ ಶ್ರೀಮತಿ ಎಸ್.ನಂದಿನಿ, ಲೇಖಪಾಲಕರಾದ ಶಿವರಾಜ್, ನಗದು ಗುಮಾಸ್ತರಾದ ಆರ್.ಎನ್.ಪ್ರಭಾಕರ್, ಪಿಗ್ಮಿ ಸಂಗ್ರಹಗಾರರಾದ ಪಿ.ಎನ್.ಪರಮೇಶ್ವರಪ್ಪ, ಹಾಗೂ ವಾಣಿವಿಲಾಸ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿಯಾದ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಕೋ-ಆರ್ಡಿನೇಟರ್ ಶ್ರೀಮತಿ ರಚನ, ಶಿಕ್ಷಕರಾದ ಉಮೇಶ್ ಯಾದವ್ ಹಾಗೂ ಶಿಕ್ಷಕಿಯರುಗಳಾದ ರಜಿಯಾಬೇಗಂ, ಗಂಗಮ್ಮ, ರಂಜಿತ, ಭಾಗ್ಯ, ಸೇರಿದಂತೆ ಸಿಬ್ಬಂದಿ ವರ್ಗದವರು, ಷೇರುಸದಸ್ಯರು ಹಾಗೂ ಗ್ರಾಹಕರು ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *