April 11, 2026
003

ಹಿರಿಯೂರು :

ಕೇಂದ್ರ ಹಾಗು ರಾಜ್ಯ ಸರ್ಕಾರಗಳು ತೆರಿಗೆ ಹಾಗು ಶುಲ್ಕದ ರೂಪಗಳಲ್ಲಿ ಜನರ ರಕ್ತ ಹೀರುತ್ತಿವೆ. ಎಂಬುದಾಗಿ ಖ್ಯಾತ ಸಾಹಿತಿ, ಕಾದಂಬರಿಕಾರ ಹಾಗೂ ಚಲನಚಿತ್ರ ನಿರ್ದೇಶಕರಾದ ಡಿ.ಸಿ.ಪಾಣಿ ಇಂದು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.

ನೊಂದಣಿ ಅವಧಿ ಮುಗಿದ ಹಳೆಯ ವಾಹನಗಳ ನವೀಕರಣದ ಶುಲ್ಕವನ್ನು ರಾಜ್ಯ ಸರ್ಕಾರ ಸುಮಾರು ಹತ್ತುಪಟ್ಟು ಹೆಚ್ಚು ಮಾಡಿದ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಹೆದ್ದಾರಿ ಶುಲ್ಕ, ಇಂಧನ ದರ ಮುಂತಾದ ಹಲವು ವಿಚಾರಗಳಿಂದ ಸರ್ಕಾರಗಳು ಹಗಲು ದರೋಡೆ ಮಾಡುತ್ತಿವೆ. ರಾಜಕಾರಣಿಗಳು, ಅಧಿಕಾರಿಗಳು ಹಾಗು ಶ್ರೀಮಂತ ಉದ್ಯಮಿಗಳ ಐಷಾರಾಮಿ ಜೀವನಕ್ಕೆ ದೇಶದ ಆರ್ಥಿಕ ವ್ಯವಸ್ಥೆ ಸರ್ವನಾಶವಾಗುತ್ತಿದ್ದು, ಪರ್ಯಾಯ ರಾಜಕೀಯ ವ್ಯವಸ್ಥೆಗೆ ಕಾಲ ಸನ್ನಿಹಿತವಾಗಿದೆ. ” ಎಂಬ ಆಶಯವನ್ನು ವ್ಯಕ್ತಪಡಿಸಿದರು.

About The Author

Leave a Reply

Your email address will not be published. Required fields are marked *