
ಹಿರಿಯೂರು :
ತಾಲ್ಲೂಕಿನ ನಾಗರೀಕರು ರೈತರು ಕೆ.ಎಸ್.ಆರ್.ಟಿ.ಸಿ ಬಸ್ ಗಳಿಂದ ಬಹಳ ತೊಂದರೆಗೆ ಒಳಗಾಗಿದ್ದಾರೆ, ಬೆಂಗಳೂರು, ತುಮಕೂರು, ಶಿರಾ ಮಾರ್ಗವಾಗಿ ಬರುತ್ತಿರುವ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಹಿರಿಯೂರು ಬಸ್ ಸ್ಟ್ಯಾಂಡ್ ನಲ್ಲಿಯೇ ಕಡ್ಡಾಯವಾಗಿ ಇಳಿಯಬೇಕೆಂದು ಕಂಡಕ್ಟರ್ ಗಳು ತೊಂದರೆ ಕೊಡುತ್ತಿದ್ದಾರೆ ಎಂಬುದಾಗಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷರಾದ ಆಲೂರುಸಿದ್ದರಾಮಣ್ಣ ಆರೋಪಿಸಿದ್ದಾರೆ.
ಪ್ರಯಾಣಿಕರು ಹಿರಿಯೂರು ಗಾಂಧಿ ಸರ್ಕಲ್ ನಲ್ಲಿ ಹಾಗೂ ಮುಂದೆ ವೇದಾವತಿ ನಗರಕ್ಕೆ ಹೋಗುವ ಪ್ರಯಾಣಿಕರು ಟಿ.ಬಿ.ಸರ್ಕಲ್ ನಲ್ಲಿ ಇಳಿಯಲು ಅವಕಾಶ ಮಾಡಿಕೊಡಬೇಕೆಂದು ಈಗಾಗಲೇ ಹಿರಿಯೂರು ತಾಲೂಕು ರೈತ ಸಂಘದಿಂದ ಚಿತ್ರದುರ್ಗ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಕೊಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಆದೇಶ ಮಾಡದೆ ಕಂಡಕ್ಟರ್ ಗಳು ಹಿರಿಯೂರು ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ನಲ್ಲಿ ಇಳಿಸಿ ಹೋಗುತ್ತಿದ್ದಾರೆ.
ಕೆ ಎಸ್ ಆರ್ ಟಿ ಸಿ ಬಸ್ ಬಸಸ್ಟ್ಯಾಂಡ್ ಕಾಂಪೌಂಡ್ 25 ಮೀಟರ್ ಅಂತರದಲ್ಲಿ ಮಧ್ಯದ ಅಂಗಡಿ ಇದ್ದು ಇಲ್ಲಿಗೆ ಕಾಂಪೌಂಡ್ ಗೋಡೆಯನ್ನು ಬಾರಿಗೆ ಹೋಗಲು ಅವಕಾಶ ಮಾಡಿಕೊಟ್ಟಿರುತ್ತಾರೆ. ಹೀಗಾಗಿ ಕುಡುಕರ ಹಾವಳಿಗೆ ಒಳಗಾಗುವ ಪರಿಸ್ಥಿತಿ ಇರುತ್ತೆ ರ್ರಾತ್ರಿ ವೇಳೆ ಹೆಂಗಸರು ಮಕ್ಕಳು ಮತ್ತು ವೃದ್ಧರು, ಬಸ್ ಸ್ಟ್ಯಾಂಡ್ ನಿಂದ ಗಾಂಧಿ ಸರ್ಕಲ್ ಮತ್ತು ವೇದಾವತಿ ನಗರಕ್ಕೆ ಹೋಗುವವರು ಆಟೋಗಳಿಗೆ ಹಣ ಕೊಟ್ಟು ಹೋಗುವ ಪರಿಸ್ಥಿತಿ ಇದೆ.
ಹೀಗಾಗಿ ಪ್ರಯಾಣಿಕರಲ್ಲಿ ಹಣ ಇಲ್ಲದೆ ನಗರದ ಬಸ್ ಸ್ಟ್ಯಾಂಡ್ ನಲ್ಲಿ ಉಳಿದು ಕಳ್ಳ ಕಾಕರ ಹಾಗೂ ಕಾಮುಕರ ಹಲ್ಲೆಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿರುತ್ತೆ. ಪ್ರಯುಕ್ತ ಚಿತ್ರದುರ್ಗ ಡಿಪೋ ಮ್ಯಾನೇಜರ್ ರವರು ಹಾಗೂ ಸಂಬಂಧ ಪಟ್ಟ ಮೇಲಾಧಿಕಾರಿಗಳು ಈ ಬಗ್ಗೆ ತುರ್ತು ಕ್ರಮ ವಹಿಸಬೇಕಾಗಿ ಹಿರಿಯೂರು ತಾಲೂಕು ನಾಗರಿಕರ ಹಾಗೂ ಮಕ್ಕಳ ತಾಯಂದಿರ ಪರವಾಗಿ ಅವರು ಒತ್ತಾಯಿಸಿದ್ದಾರೆ.
ಒಂದು ವೇಳೆ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಹಿರಿಯೂರಿನ ಗಾಂಧಿ ಸರ್ಕಲ್ ನಲ್ಲಿ ಹಾಗೂ ಮುಂದೆ ವೇದಾವತಿ ನಗರಕ್ಕೆ ಹೋಗುವ ಪ್ರಯಾಣಿಕರು ಟಿ.ಬಿ.ಸರ್ಕಲ್ ನಲ್ಲಿ ಇಳಿಯಲು ಅವಕಾಶ ಮಾಡಿಕೊಡದಿದ್ದರೆ ಹೀಗೆ ಮುಂದುವರೆದರೆ ಹಿರಿಯೂರು ತಾಲೂಕು ರೈತ ಸಂಘದ ವತಿಯಿಂದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂಬುದಾಗಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷರಾದ ಆಲೂರುಸಿದ್ದರಾಮಣ್ಣ ಎಚ್ಚರಿಸಿದ್ದಾರೆ.
