April 11, 2026
0002

ಹಿರಿಯೂರು :                                              

ನಗರದ ಕೃಷಿಇಲಾಖೆ ಆವರಣದಲ್ಲಿ ಎಪ್ರಿಲ್ 9 ರ ಗುರುವಾರದಂದು ಬೆಳಗ್ಗೆ 10:30ಕ್ಕೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಹಣ ತುಂಬಿರುವ ರೈತರು ಬೆಳೆನಷ್ಟ ಅನುಭವಿಸುತ್ತಿದ್ದು, ಅಂತಹ ರೈತರಿಗೆ ಬೆಳೆವಿಮೆ ಪಾವತಿಸದೆ ಸರ್ಕಾರ ವಿಳಂಬ ದೋರಣೆ ಅನುಸರಿಸುತ್ತಿರುವುದರ ಕುರಿತು ಚಳ್ಳಕೆರೆ ರಸ್ತೆಯಲ್ಲಿ ಇರುವ ಕರ್ನಾಟಕ ರಾಜ್ಯ ರೈತ ಸಂಘದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ತಾಲ್ಲೂಕು ರೈತ ಸಂಘದ ಯುವಘಟಕದ ಅಧ್ಯಕ್ಷರಾದ ಆರ್.ಚೇತನ್ ಯಳನಾಡು ತಿಳಿಸಿದ್ದಾರೆ.

ಸರ್ಕಾರದ ಈ ರೈತವಿರೋಧಿ ಧೋರಣೆಯ ವಿರುದ್ಧ ನಡೆಯುತ್ತಿರುವ ಈ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ರೈತ ಮುಖಂಡರಗಳು ಭಾಗವಹಿಸುವ ಮೂಲಕ ಕರ್ನಾಟಕ ರಾಜ್ಯ ರೈತ ಸಂಘದ ಬೃಹತ್ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂಬುದಾಗಿ ತಾಲ್ಲೂಕು ರೈತ ಸಂಘದ ಯುವಘಟಕದ ಅಧ್ಯಕ್ಷರಾದ ಆರ್.ಚೇತನ್ ಯಳನಾಡು ರವರು ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *