
ಹಿರಿಯೂರು :
ತಾಲ್ಲೂಕಿನ ಶ್ರೀಶುಭೋದಯ ಶೈಕ್ಷಣಿಕ ಸೇವಾ ವೃದ್ದಾಶ್ರಮದ ದಾನಿಗಳು ಹಿತ್ಯಷಿಗಳು ಮಾರ್ಗದರ್ಶಕರು ವಿಜಯ ಕರ್ನಾಟಕ ಪತ್ರಿಕೆ ವರದಿಗಾರರು, ಅಂಬೇಡ್ಕರ್ ಪದವಿ ಪೂರ್ವ ಕಾಲೇಜ್ ಇತಿಹಾಸ ಉಪನ್ಯಾಸಕರು. ಈ.ಪ್ರಕಾಶ್ ಸರ್ ರವರ ಆತ್ಮೀಯ ಸ್ನೇಹಿತರು ಆದ ಅಬ್ಬಿನಹೊಳೆ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ದೇವರಾಜ್ ರವರ ಹುಟ್ಟುಹಬ್ಬದ ಪ್ರಯುಕ್ತ ಅನ್ನಸಂತರ್ಪಣೆ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂಬುದಾಗಿ ಆಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿ ಹೇಳಿದರು.
ತಾಲ್ಲೂಕಿನ ಶ್ರೀಶುಭೋದಯ ಶೈಕ್ಷಣಿಕ ಸೇವಾ ವೃದ್ದಾಶ್ರಮದಲ್ಲಿ ಅಬ್ಬಿನಹೊಳೆ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ದೇವರಾಜ್ ರವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿವರ್ಷದಂತೆ ಈ ದಿನವೂ ಸಹ ಶ್ರೀ ಆಶ್ರಮದ ಹಿರಿಯರಿಗೆ ಮದ್ಯಾಹ್ನದ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿಸಿರುತ್ತಾರೆ, ಆಶ್ರಮಕ್ಕೆ ಎಲೆಮರೆಯ ಕಾಯಿಯಂತೆ ಸಹಾಯ ಸಲ್ಲಿಸಿ ಮಾರ್ಗದರ್ಶನ ನೀಡುತ್ತಾರೆ, ಸರಳ, ಸಜ್ಜನಿಕೆ, ವ್ಯಕ್ತಿತ್ವ ಉಳ್ಳವರು ಸಮಾಜದಲ್ಲಿ ಇನ್ನು ಹೆಚ್ಚಿನದಾಗಿ ಸಹಾಯ ಮಾಡುವ ಶಕ್ತಿ ಭಗವಂತನು ಅವರಿಗೆ ಕರುಣಿಸಲಿ ಎಂಬುದಾಗಿ ಆಶ್ರಮ ಸಮಿತಿ ವತಿಯಿಂದ ಶುಭಹಾರೈಸಿದ್ದಾರೆ.
