
ಹಿರಿಯೂರು :
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವಿ, ಕತೆಗಾರ, ಕಾದಂಬರಿಕಾರ, ಸಂಶೋಧಕ ,ಪತ್ರಕರ್ತ, ಶಿಕ್ಷಕ , ಸಂಘಟಕ, ಸ್ವಾತಂತ್ರ್ಯ ಹೋರಾಟಗಾರ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ದುಡಿದು ಕನ್ನಡದ ಗಜಲ್ ಪ್ರಕಾರಕ್ಕೆ ಜೀವಂತಿಕೆ ಕೊಟ್ಟವರು ಕವಿ ಶಾಂತರಸ ಆಗಿದ್ದಾರೆ ಎಂಬುದಾಗಿ ಸಾಹಿತಿ ಹಾಗೂ ಅನುವಾದಕರಾದ ಪ್ರೊ,ಎಂ.ಜಿ.ರಂಗಸ್ವಾಮಿ ಹೇಳಿದರು
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಬಹುಮುಖಿ ಕಲಾಕೇಂದ್ರ ಚಿತ್ರದುರ್ಗ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಿರಿಯೂರು, ಸಂಸ ಥಿಯೇಟರ್ ಬೆಂಗಳೂರು, ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕವಿ ಶಾಂತರಸರವರ 101ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕವಿ ಶಾಂತರಸ ಅವರು 1939ರಲ್ಲಿ ವಂದೇ ಮಾತರಂ ಚಳುವಳಿಯಲ್ಲಿ ಪಾಲ್ಗೊಂಡು ಅಲ್ಲಿಂದ ಹೋರಾಟ ಆರಂಭಿಸಿದ ಇವರು ಅಸಮಾನತೆ ರೂಢಿ ಸಂಪ್ರದಾಯ ಕಂದಾಚಾರ ಬಂಡವಾಳ ಶಾಹಿ ಪದ್ಧತಿಗಳ ವಿರುದ್ಧ ಹೋರಾಡಿದ ಧೀಮಂತ ಹೋರಾಟಗಾರ, ಹೈದರಾಬಾದ್ ನಿಜಾಮನನ್ನು ನಿಂದಿಸಿದ ಕಾರಣ 9ನೇ ತರಗತಿಯಲ್ಲಿ ಫೇಲಾಗಿ ನಂತರ ಓದುವ ಸಲುವಾಗಿ ಊರು ಊರು ಸುತ್ತಿ ಕಲಬುರ್ಗಿ ರಾಯಚೂರು ನಾತೂರು ಗಳಲ್ಲಿ ಶಿಕ್ಷಣ ಪಡೆದು ಶಿಕ್ಷಕರಾದರು .
ದೂರಶಿಕ್ಷಣದಲ್ಲಿ ಬಿಎ. ಎಂಎ. ಪದವಿ ಪಡೆದು ಉಪನ್ಯಾಸಕರಾಗಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು ಸಾಹಿತ್ಯ ಸಂಘಟನೆ ಸಂಸ್ಕೃತಿಯ ಅಭಿವೃದ್ಧಿ ಹಾಗೂ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗಾಗಿ ಹೋರಾಡಿದರು ಕನ್ನಡಭಾಷೆಯ ಅಭಿವೃದ್ಧಿಗಾಗಿ ಹೋರಾಟ ಮಾಡಿ ಕನ್ನಡ ಭಾಷೆಗೆ ಸರಿಯಾದ ಸ್ಥಾನಮಾನ ಸಿಕ್ಕಿಲ್ಲವೆಂಬ ಕಾರಣಕ್ಕಾಗಿ 1992ರಲ್ಲಿ ನೀಡಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಹಿಂದಿರುಗಿಸಿದ ಬಂಡಾಯಗಾರ,
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಸಹ ಅವರು ಸೇವೆ ಸಲ್ಲಿಸಿದ್ದು,, ಕಳೆದ 2006ರಲ್ಲಿ ಬೀದರನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು, ರಾಯಚೂರಿನಲ್ಲಿ ಸತ್ಯ ಸ್ನೇಹ ಎಂಬ ಪ್ರಕಾಶನವನ್ನು ತೆರೆದು ಕನ್ನಡನಾಡಿಗೆ 42ಕ್ಕಿಂತ ಹೆಚ್ಚು ಕೃತಿಗಳನ್ನು ನೀಡಿದ್ದಾರೆ . ಇವರ ಸೇವೆ ಸಾಹಿತ್ಯ ಕ್ಷೇತ್ರದಲ್ಲಿ ಅಜರಾಮರ ವಾಗಿ ಉಳಿದಿದೆ ಎಂದು ಹೇಳಿದರು.

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತುದಾರರಾದ ಜಿ.ಟಿ .ಲೋಕೇಶ್. ಮಾತನಾಡಿ, ಕವಿ ಶಾಂತರಸ ಅವರು 1974 ಸೆಪ್ಟೆಂಬರ್ 7ರಂದು ರಾಯಚೂರು ಜಿಲ್ಲೆಯ ಹೆಂಬೆರಾಳು ಪುಟ್ಟ ಗ್ರಾಮದಲ್ಲಿ ಜನಿಸಿ 1942ರಲ್ಲಿ ನಡೆದ ಬ್ರಿಟೀಷರು ಭಾರತ ಬಿಟ್ಟು ತೊಲಗಿ ಹೋರಾಟದಿಂದ ಸ್ಫೂರ್ತಿಗೊಂಡು ಕಥೆ ಕವನ ನಾಟಕ ಬರೆಯಲು ಆರಂಭಿಸಿದ ಇವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ .ರಂಗಸ್ವಾಮಿ ಸಕ್ಕರ. ಮಾತನಾಡಿ ಶಾಂತರಸ ಕನ್ನಡ ಸಾಹಿತ್ಯ ಕ್ಷೇತ್ರದ ಪಾದರಸ ಕನ್ನಡದ ಎಲ್ಲಾ ಕ್ಷೇತ್ರಗಳಲ್ಲಿ ದುಡಿದು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ, ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ, ಗುಲ್ಬರ್ಗ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪದವಿ, ಹಂಪಿ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಪದವಿ ನೀಡಿ ಗೌರವಿಸಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ತರಬೇತಿ ಕೈಗಾರಿಕಾ ಸಂಸ್ಥೆಯ ಪ್ರಾಚಾರ್ಯರಾದ ಮಹಮದ್ ಜಬಿವುಲ್ಲಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹರ್ತಿಕೋಟಿಮಹಾಸ್ವಾಮಿ, ಬಹುಮುಖಿ ಕಲಾಕೇಂದ್ರದ ಸಂಚಾಲಕರಾದ ಟಿ.ಮಧು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನನ್ನಿವಾಳ ಹನುಮಂತಪ್ಪ, ಮದಕರಿಪುರದ ರಂಗಭೂಮಿ ಕಲಾವಿದ ಟಿ ,ಶ್ರೀನಿವಾಸಮೂರ್ತಿ, ಕಾಲೇಜಿನ ಆಡಳಿತ ಅಧಿಕಾರಿ ಈರಗೋಪಯ್ಯ, ಮಣಿಯಮ್ಮ ಕೆ.ನವೀನ್, ಅಬ್ದುಲ್ ಸಮದ್. ಪರ್ಹತಂಕಿನ್. ವೇಣುಗೋಪಾಲ್. ಪರಮೇಶ್ವರಪ್ಪ. ಯಮುನಾ.ಟಿ. ಸುಮಲತಾ. ಬಸವರಾಜ್. ಸಚಿನ್. ಹಾಗೂ ಇತರರು ಉಪಸ್ಥಿತರಿದ್ದರು.
