
ಹಿರಿಯೂರು :
ಬಾಬು ಜಗಜೀವನ್ ರಾಮ್ ರವರು ಈ ದೇಶ ಕಂಡ ಪ್ರಬುದ್ಧ ರಾಜಕಾರಣ ಮುತ್ಸದ್ಧಿ, ಭಾರತದ ಸ್ವಾತಂತ್ರ್ಯ ಹೋರಾಟಗಾರ, ದಲಿತ ನಾಯಕ ಮತ್ತು ‘ಬಾಬೂಜಿ’ ಎಂದೇ ಜನಪ್ರಿಯರಾಗಿದ್ದ ಅವರು, ಭಾರತದ ಮೊದಲ ಸಚಿವ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿ, ನಂತರ ರಕ್ಷಣಾ ಸಚಿವರು ಮತ್ತು ಆಹಾರ ಸಚಿವರಾಗಿ, ಮತ್ತು ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂಬುದಾಗಿ ಡೆಪ್ಯುಟಿ ತಹಶೀಲ್ದಾರ್ ಸಿ.ಕೃಷ್ಣಕುಮಾರ್ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ನಗರಸಭೆ ಮತ್ತು ದಲಿತ ಸಂಘಟನೆಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಹಿರಿಯೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಸಿರುಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ಡಾ.ಬಾಬುಜಗಜೀವನ್ ರಾಂ ರವರ 119ನೇ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಅವರು ಮಾತನಾಡಿದರು.
ಬಾಬು ಜಗಜೀವನ್ ರಾಮ್ ಅವರು ಸುಮಾರು 50 ವರ್ಷಗಳ ಕಾಲ ಸಂಸದರಾಗಿ ದಾಖಲೆ ನಿರ್ಮಿಸಿದ್ದು, ದಲಿತರ ಹಕ್ಕುಗಳಿಗಾಗಿ ಹೋರಾಡಿದ ‘ಹಸಿರು ಕ್ರಾಂತಿಯ ಹರಿಕಾರ’ ಎಂದೇ ಖ್ಯಾತರಾಗಿದ್ದಾರೆ. ಇವರ ತತ್ವ ಹಾಗೂ ಆದರ್ಶಗಳನ್ನು ಇಂದಿನ ರಾಜಕೀಯ ನಾಯಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಜೆ.ದಿನೇಶ್, ಅಕ್ಷರ ದಾಸೋಹ ಚಿತ್ರಾಲ ಮಹೇಶ್ವರ ರೆಡ್ಡಿ, ಆರಕ್ಷಕ ವೃತ್ತ ನೀರಿಕ್ಷಕರಾದ ಮಹಮ್ಮದ್ ಸಿರಾಜ್, ಖಜಾನೆ ಇಲಾಖೆ ಸಂಜಯ್, ಅರಣ್ಯ ಇಲಾಖೆ ಬಾಬು, ಮೀನುಗಾರಿಕೆ ಇಲಾಖೆ ಮಂಜುನಾಥ್, ರೇಷ್ಮೆ ಇಲಾಖೆ ಈಶ್ವರಪ್ಪ, ಬಿಸಿಎಂ ಇಲಾಖೆ ಶಿವಕುಮಾರ್, ಸುಧೀರ್, ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ರಾಮಚಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಾಘವೇಂದ್ರ, ಪರಿಶಿಷ್ಟ ಜಾತಿಯ ಮುಖಂಡರುಗಳಾದ ಎಂ.ಡಿ.ಸಣ್ಣಪ್ಪ, ಜಿ.ಎಲ್.ಮೂರ್ತಿ,ಆಲೂರು ಕಾಂತ ರಾಜ್, ರಘುನಾಥ್ ಕೆ ಆರ್ ಹಳ್ಳಿ, ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷರುಗಳಾದ ಲಕ್ಷ್ಮಣ್, ಅಲ್ಪ ಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷರಾದ ಸಾದಿಕ್, ತಾಲ್ಲೂಕು ಅಧ್ಯಕ್ಷರಾದ ಓಂಕಾರ್ ಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
