
ಹಿರಿಯೂರು :
ಜಿಲ್ಲೆಯ ಬಡರೋಗಿಗಳ ಪಾಲಿನ ಆರಾಧ್ಯದೈವ, ಜಿಲ್ಲೆಯ ಹೆಸರಾಂತ ಮಕ್ಕಳ ವೈದ್ಯರು, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿಗಳು ಆಗಿರುವ ಇವರು ಜಿಲ್ಲೆಯ ಜನರ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಾ ಮಕ್ಕಳ ಆರೋಗ್ಯ ರಕ್ಷಣೆ ಮಾಡುತ್ತಾ ಅತ್ಯಂತ ಜನಪ್ರಿಯತೆ ಗಳಿಸಿರುವ ನಗರದ ಹೆಸರಾಂತ ವೈದ್ಯರಾಗಿದ್ದು, ಅತ್ಯಂತ ಸರಳ, ಸಜ್ಜನಿಕೆ, ಸ್ನೇಹಮಯ ವ್ಯಕ್ತಿತ್ವದ ಮಕ್ಕಳ ತಜ್ಞರಾದ ಡಾ.ಮಹಾಲಿಂಗಪ್ಪರವರಿಗೆ “ಹಿರಿಯೂರು ನ್ಯೂಸ್” ತಂಡದಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಲಾಗಿದೆ.
ಅವರ ಈ ಹುಟ್ಟುಹಬ್ಬದ ಸಂದರ್ಭದಲ್ಲಿ ನಮ್ಮ ಅತ್ಯಂತ ಆತ್ಮೀಯರಾದ ಡಾ.ಮಹಾಲಿಂಗಪ್ಪ ಮತ್ತು ಅವರ ಕುಟುಂಬ ವರ್ಗದವರಿಗೆ ಆ ಭಗವಂತ ಆರೋಗ್ಯ ಆಯಸ್ಸು ಯಶಸ್ವಿನ ಜೊತೆಗೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಕೊಟ್ಟು ಕಾಪಾಡಲಿ ಎಂಬುದಾಗಿ “ಹಿರಿಯೂರು ನ್ಯೂಸ್” ತಂಡದ ಮುಖ್ಯಸ್ಥರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ, ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆರಂಗನಾಥ್, ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್, ಪರಮೇಶ್ವರಪ್ಪ, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ, ಇವರುಗಳು ಶುಭಹಾರೈಸಿದ್ದಾರೆ.
