
ಹಿರಿಯೂರು :
ತಾಲೂಕಿನಲ್ಲಿ ರೈತರು ಬಡವರು ಹಾಗೂ ಮಧ್ಯಮ ವರ್ಗದವರು ವಿವಿಧ ಇಲಾಖೆಗಳಲ್ಲಿ ಮೂಲಭೂತ ಹಕ್ಕುಗಳಿಗಾಗಿ ಅಲೆದಾಡುತ್ತಿರುವುದು ನಮ್ಮ ಸಂಘಟನೆ ಗಮನಕ್ಕೆ ಬಂದಿದ್ದು, ಸಾರ್ವಜನಿಕರ ಹಿತಾಸಕ್ತಿಗೋಸ್ಕರ ಆಡಳಿತವರ್ಗದವರು ಸಾರ್ವಜನಿಕರ ತಾಲ್ಲೂಕಿನ ಜನರ ಕುಂದು-ಕೊರತೆಗಳನ್ನು ಪರಿಹರಿಸಬೇಕು ಎಂಬುದಾಗಿ ಸಿರಿಗನ್ನಡನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಮುಕುಂದ ಒತ್ತಾಯಿಸಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಸಿರಿಗನ್ನಡನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾಲ್ಲೂಕಿನ ಜನರ ಕುಂದು-ಕೊರತೆಗಳನ್ನು ಪರಿಹರಿಸುವಲ್ಲಿ ಸೂಕ್ತಕ್ರಮಕೈಗೊಳ್ಳುವಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಒತ್ತಾಯಿಸಿ, ತಾಲ್ಲೂಕು ತಹಶೀಲ್ದಾರರಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ನಗರದ ಕೊಳಚೆ ಪ್ರದೇಶದಲ್ಲಿ ಸುಮಾರು 30 ರಿಂದ 40 ವರ್ಷಗಳ ತನಕ ವಾಸ ಮಾಡುತ್ತಿರುವ ಮೂಲ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು, ಈ ಹಿಂದೆ ಕೊಳಚೆ ಪ್ರದೇಶಗಳಲ್ಲಿ ವಾಸಿಸುವಂತಹ ಕೆಲವು ಬುಡಕಟ್ಟಿನವರಿಗೆ ಸ್ಲಂ ಬೋರ್ಡ್ ನಿಂದ ಮನೆಗಳ ನಿರ್ಮಿಸಿದ್ದು, ಸದರಿ ಮನೆ ನಿವೇಶನದ ಖರ್ಚು ವೆಚ್ಚಿನ ಹಣ ಮಂಜುರಾಗದೆ ಬಾಕಿ ಉಳಿದುಕೊಂಡಿರುವ ಹಣವನ್ನು ಕೂಡಲೇ ಫಲಾನುಭವಿಗಳ ಬ್ಯಾಂಕ್ ಉಳಿತಾಯ ಖಾತೆಗೆ ಮಾಡಬೇಕು
ನಗರದ ಎಲ್ಲ ವಾರ್ಡುಗಳ ಕಸವನ್ನು ತೆಗೆಸುವುದರ ಜೊತೆಗೆ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಎಲ್ಲ ವಾರ್ಡ್ ಗಳಲ್ಲಿ ಗುಂಡಿ ಬಿದ್ದ ರಸ್ತೆಗಳಿಗೆ ನೂತನ ರಸ್ತೆಗಳ ನಿರ್ಮಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು, ತಾಲೂಕು ಪ್ರಧಾನ ಸರ್ಕಾರಿ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗಳು ಬೆಳಗ್ಗೆಯಿಂದ ಸಂಜೆವರೆಗೆ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು
ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ವಿವಿಧ ಇಲಾಖೆಯ ಅಧಿಕಾರಿಗಳು ಕೆಲಸ ನಿರ್ವಹಿಸುವತ್ತ ತಾಲ್ಲೂಕು ಆಡಳಿತ ಗಮನ ಹರಿಸಬೇಕೆಂದು ಒತ್ತಾಯಿಸಿ ಸಿರಿಗನ್ನಡನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಹಶೀಲ್ದಾರರಾದ ಸಿದ್ದೇಶ್ ರವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿರಿಗನ್ನಡನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾದ ನರಸಿಂಹಮೂರ್ತಿ, ಅಧ್ಯಕ್ಷರಾದ ಸೈಯದ್ ಜಬ್ಬರ್, ಉಪಾಧ್ಯಕ್ಷರಾದ ಜಿ.ಎ.ಕರಿಯಣ್ಣ, ಖಜಾಂಚಿ ಜೋಸೆಫ್ ಹಾಡ್ಸನ್, ಪ್ರಧಾನ ಕಾರ್ಯದರ್ಶಿ ಎಸ್.ಮುಕುಂದ, ಸಂಘಟನಾ ಕಾರ್ಯದರ್ಶಿ ಕೆ.ನಾಗರಾಜು, ಸಂಚಾಲಕರಾದ ಸೈಯದ್ ಸದ್ದಾಮ್, ಕಾರ್ಯಕಾರಣಿ ಸದಸ್ಯರಾದ ಅಫ್ಜಲ್ ಖಾನ್, ಕಾರ್ಯಕಾರಣಿ ಸದಸ್ಯರುಗಳಾದ ಓ.ಪ್ರಸನ್ನ, ಹಬೀಬ್, ಸುಭಾನ್ ಸಾಬ್, ಆರ್.ಕರಿಯಪ್ಪ, ಆವೇದಕರುಗಳಾದ ಜಿ.ಟಿ.ಹನುಮಂತಪ್ಪ, ಉಮಾಪತಿ, ತಿಪ್ಪೇಸ್ವಾಮಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
