April 11, 2026
00004

ಹಿರಿಯೂರು :

ನಗರದ ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಹಿರಿಯೂರು ಮಕ್ಕಳ ತಜ್ಞರು ಗಣೇಶ ಮಕ್ಕಳ ಆಸ್ಪತ್ರೆಯ ವೈದ್ಯರು ಹಾಗೂ ಶ್ರೀ ಆಶ್ರಮದ ಹಿತ್ಯಷಿಗಳು ಮಾರ್ಗದರ್ಶಕರು ಆದ ಡಾ.ಎಸ್. ಆರ್. ಮಹಾಲಿಂಗಪ್ಪ ರವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಪ್ರತಿವರ್ಷದಂತೆ ಈ ದಿನವೂ ಸಹ ಶ್ರೀಆಶ್ರಮದ ವೃದ್ಧರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂಬುದಾಗಿ ಆಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿ ಹೇಳಿದರು.

ತಾಲ್ಲೂಕಿನ ಶ್ರೀಶುಭೋದಯ ವೃದ್ಧಾಶ್ರಮದಲ್ಲಿ ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ.ಎಸ್.ಆರ್.ಮಹಾಲಿಂಗಪ್ಪರವರ ಹುಟ್ಟುಹಬ್ಬದ ಪ್ರಯುಕ್ತ ಆಶ್ರಮದ ನಿವಾಸಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶ್ರೀಯುತ ಡಾ.ಮಹಾಲಿಂಗಪ್ಪನವರ ಸೇವಾಮನೋಭಾವಕ್ಕೆ ಶ್ರೀಶುಭೋದಯ ವೃದ್ಧಾಶ್ರಮ ಸಮಿತಿ ವತಿಯಿಂದ ಅವರಿಗೆ ಹಾಗೂ ಅವರ ಕುಟುಂಬವರ್ಗಕ್ಕೆ ದೈವಾನುಗ್ರಹ ಪ್ರಾಪ್ತಿಯಾಗಲೆಂದು ಆಶ್ರಮದ ನಿವಾಸಿಗಳ ಪರವಾಗಿ ತುಂಬುಹೃದಯದ ಧನ್ಯವಾದಗಳು ಎಂಬುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಡಾ.ಮಹಾಲಿಂಗಪ್ಪ ನವರ ಕುಟುಂಬಸ್ಥರು ಹಾಗೂ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *