April 11, 2026
0009

ಹಿರಿಯೂರು :    

ತಾಲೂಕಿನ ಶ್ರೀಕುನಕಲಗುಂಡಿ ಪುಣ್ಯಕ್ಷೇತ್ರ, ಕೂನಿಕೆರೆ ಆಂಜನೇಯಸ್ವಾಮಿ, ಕಾಟಮಲಿಂಗೇಶ್ವರಸ್ವಾಮಿ, ಭೂತರಾಯಸ್ವಾಮಿ ಮತ್ತು ಲಕ್ಷ್ಮೀ ದೇವರುಗಳ ರಥೋತ್ಸವ ಏಪ್ರಿಲ್ 10ರಂದು ನಡೆಯಲಿದೆ ಎಂಬುದಾಗಿ ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.

ಈ ರಥೋತ್ಸವದ ಅಂಗವಾಗಿ ದೇವರಿಗೆ ವಿಶೇಷಪೂಜಾ ಕಾರ್ಯಕ್ರಮಗಳು, ಅರ್ಚನೆ, ಅಭಿಷೇಕ, ಮಹಾಮಂಗಳಾರತಿ, ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಸಹ ಏರ್ಪಡಿಸಲಾಗಿದೆ. ಭಕ್ತಾದಿಗಳು ದೇವಾಲಯದಲ್ಲಿ ನಡೆಯುವ ಜಾತ್ರೆಯ ಎಲ್ಲಾ ಪೂಜಾಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *