
ಹಿರಿಯೂರು :
ಸಾರ್ವಜನಿಕರು ಭಾರತ ಜನಗಣತಿ 2027ರ ಸ್ವಯಂ ಗಣತಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು, ಸಾರ್ವಜನಿಕರು ತಂತ್ರಾಂಶದ ಮೂಲಕ ತಮ್ಮ ಕುಟುಂಬದ ಮಾಹಿತಿಯನ್ನು ತಾವೇ ಸ್ವತಃ ದಾಖಲಿಸಬಹುದು, ಹೀಗೆ ದಾಖಲಿಸಿದ ನಂತರ ಬರುವ ಗಣತಿ ಸಂಖ್ಯೆಯನ್ನು ನಿಮ್ಮ ಮನೆಗೆ ಬರುವ ಗಣತಿದಾರರಿಗೆ ನೀಡಿ ಸಹಕರಿಸಬೇಕು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸಿಂ ಹೇಳಿದರು.
ನಗರದಲ್ಲಿ ಭಾರತ ಜನಗಣತಿ 2027ರ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಯಂಗಣತಿ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿರಿಯೂರು ನಗರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸುಜಾತ ಸುವರ್ಣ ಬಿ ರವರು ನಗರದ ಸಿಎಂ ಬಡಾವಣೆಯಲ್ಲಿರುವ ಸಾಹಿತಿ ಎಂಜಿ ರಂಗಸ್ವಾಮಿ ಅವರ ಕುಟುಂಬದ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸುವ ಮೂಲಕ ಸ್ವಯಂ ಗಣತಿ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಶಾಲಾ ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷರಾದ ಅಮೃತೇಶ್ವರ ಸ್ವಾಮಿ, ಗರೀಬ್ ಅಲಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ನಾಗೇಂದ್ರ ನಾಯಕ್, ತಾಲ್ಲೂಕು ತಹಶೀಲ್ದಾರರಾದ ಎಂ.ಸಿದ್ದೇಶ್, ಸ್ವಯಂ ಗಣತಿ ಸಿಬ್ಬಂದಿಗಳು, ನಗರಸಭೆ ಹಾಗೂ ತಾಲೂಕು ಕಚೇರಿ ಅಧಿಕಾರಿಗಳು ಮತ್ತು ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
