
ಹಿರಿಯೂರು :
ತಾಲ್ಲೂಕಿನ ಶ್ರೀಶುಭೋದಯ ಶೈಕ್ಷಣಿಕ ಸೇವಾ ವೃದ್ದಾಶ್ರಮದ ಹಿತೈಷಿಗಳೂ, ದಾನಿಗಳು ಆದ ಗಣೇಶ್ ರವರು ಪ್ರತಿ ತಿಂಗಳಲ್ಲಿ ಮೊದಲನೇ ಬುಧವಾರದಂದು ಮದ್ಯಾಹ್ನದ ಹೋಳಿಗೆ ಊಟವನ್ನು ಎಲ್ಲಾ ಹಿರಿಯರಿಗೆ ವ್ಯವಸ್ಥೆ ಮಾಡಿಸುತ್ತಿದ್ದು, ಭಗವಂತನು ಅವರಿಗೆ ಹಾಗೂ ಅವರ ಕುಟುಂಬವರ್ಗದವರಿಗೆ ಆರೋಗ್ಯ, ಆಯಸ್ಸು, ಯಶಸ್ಸು ಕರುಣಿಸಲಿ ಎಂಬುದಾಗಿ ಆಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿ ಹೇಳಿದರು.
ತಾಲ್ಲೂಕಿನ ಶ್ರೀಶುಭೋದಯ ಶೈಕ್ಷಣಿಕ ಸೇವಾ ವೃದ್ದಾಶ್ರಮದಲ್ಲಿ ಆಶ್ರಮದ ನಿವಾಸಿಗಳಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿ, ನಂತರ ಅವರು ಮಾತನಾಡಿದರು.
ಶ್ರೀಯುತ ಗಣೇಶ್ ರವರ ಸೇವಾಮನೋಭಾವಕ್ಕೆ ಶ್ರೀಆಶ್ರಮ ಸಮಿತಿ ವತಿಯಿಂದ ಅವರಿಗೆ ಹಾಗೂ ಅವರ ಕುಟುಂಬವರ್ಗಕ್ಕೆ ದೈವಾನುಗ್ರಹ ಪ್ರಾಪ್ತಿಯಾಗಲೆಂದು ಪ್ರಾರ್ಥಿಸಿ, ಗಣೇಶ್ ರವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.
