
ಹಿರಿಯೂರು :
ನಗರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರ 2026-27 ನೇ ಸಾಲಿನಲ್ಲಿ ಆಸ್ತಿ ತೆರಿಗೆ ಪಾವತಿಸಿ ನಗರದ ಅಭಿವೃದ್ಧಿಗೆ ಸಹಕರಿಸಿ ಎಂಬುದಾಗಿ ನಗರಸಭೆ ಹೇಳಿದರು ನಗರದ ಆಸ್ತಿ ಮಾಲೀಕರಿಗೆ ಮನವಿ ಮಾಡಿದ್ದಾರೆ ಏಪ್ರಿಲ್ ತಿಂಗಳಲ್ಲಿ ತೆರಿಗೆ ಪಾವತಿಸಿ ಪಡೆದುಕೊಳ್ಳಿ ಎಂಬುದಾಗಿ ಪೌರಾಯುಕ್ತರಾದಂತ ಎ.ವಾಸೀಂರವರು ನಗರದ ನಾಗರೀಕರಲ್ಲಿ ಮನವಿ ಮಾಡಿದ್ದಾರೆ.
ಏಪ್ರಿಲ್ 1ರಿಂದ 30ರವರೆಗೆ ಮಾತ್ರ ಆಸ್ತಿ ತೆರಿಗೆ ಪಾವತಿಯ ಮೇಲೆ ಶೇಕಡ ಐದರಷ್ಟು ರಿಯಾಯಿತಿ ಇರುತ್ತದೆ, ಮೇ 1ರಿಂದ 30ರವರೆಗೆ ರಿಯಾಯಿತಿ ಹಾಗೂ ದಂಡ ಇರುವುದಿಲ್ಲ ಜೂನ್ 1 ರಿಂದ ಪ್ರತಿ ತಿಂಗಳು ಶೇಕಡ ಎರಡರಷ್ಟು ದಂಡ ವಿಧಿಸಲಾಗುವುದು, ಆಸ್ತಿ ಮಾಲೀಕರು ಸಮಯಕ್ಕೆ ಸರಿಯಾಗಿ ಏಪ್ರಿಲ್ ತಿಂಗಳಲ್ಲೇ ತೆರಿಗೆ ಪಾವತಿಸುವ ಮೂಲಕ ನಗರಸಭೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂಬುದಾಗಿ ತಿಳಿಸಿದ್ದಾರೆ
ಇದೇ ಸಂದರ್ಭದಲ್ಲಿ ನಿಮ್ಮ ಕಂದಾಯ, ನಿಮ್ಮ ಸೌಲಭ್ಯಗಳಿಗಾಗಿ ನಗರದ ನಿಮ್ಮ ಸ್ವಚ್ಛತೆಗಾಗಿ ನಿಮ್ಮ ಆಸ್ತಿ ತೆರಿಗೆಯನ್ನು ಪಾವತಿಸಿ ಎಂಬುದಾಗಿ ಮನವಿ ಮಾಡಿರುವ ಅವರು ಈಗಾಗಲೇ ನಗರದ ಅಭಿವೃದ್ಧಿಗೆ ಕೈಜೋಡಿಸಿ ಆಸ್ತಿ ತೆರಿಗೆ ಪಾವತಿಸಿರುವ ನಗರದ ಆಸ್ತಿ ಮಾಲೀಕರುಗಳಿಗೆ ಪೌರಾಯುಕ್ತ ವಾಸಿಂರವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
