
ಹಿರಿಯೂರು :
ನಗರದ ರೆಡ್ ಕ್ರಾಸ್ ಮತ್ತು ರೋಟರಿ ಸೇವಾ ಸಂಸ್ಥೆಗಳು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜನಪರ ಕಾಳಜಿ ಹೊಂದಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವುದು ಸಮಾಜದಲ್ಲಿ ನಿಜಕ್ಕೂ ಶ್ಲಾಘನೀಯವಾದ ಕೆಲಸವಾಗಿದೆ ಎಂಬುದಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳಾದ ಅನಿಲ್ ರವರು ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆ ಹಿರಿಯೂರು ಶಾಖೆ, ರೋಟರಿ ಸಂಸ್ಥೆ ಹಾಗೂ ಸರ್ವೋದಯ ಬ್ರಹ್ಮ ಜ್ಞಾನ ಸಮಾಜ ಹಿರಿಯೂರು ಬೆಂಗಳೂರು ಸಪ್ತಗಿರಿ ಆಸ್ಪತ್ರೆ ಲಯನ್ಸ್ ಕಣ್ಣಿನ ಆಸ್ಪತ್ರೆ ಇವರುಗಳ ಸಂಯುಕ್ತ ಶ್ರೇಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಉಚಿತ ಹೃದಯ ರೋಗ ನರರೋಗ ಮೂತ್ರಪಿಂಡ ಕ್ಯಾನ್ಸರ್ ಕಾಯಿಲೆಗಳ ತಪಾಸಣೆ ಶಿಬಿರದಲ್ಲಿ ಸಂಸ್ಥೆಗಳಿಂದ ಅಭಿನಂದನೆ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲೂ ಆರೋಗ್ಯ ಸೇವಾ ಶಿಬಿರಗಳನ್ನು ಆಯೋದಿಸಲು ಧರ್ಮಸ್ಥಳ ಸಂಸ್ಥೆಯು ಕೈಜೋಡಿಸುವುದಾಗಿ ತಿಳಿಸಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ.ಎಲ್.ಗಿರಿಧರ್ ಗೌರವ ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿ, ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ಜನರಿಗಾಗಿ ಉಚಿತ ಅಗತ್ಯ ಸೇವೆಗಳನ್ನು ನಿಸ್ವಾರ್ಥವಾಗಿ ನಡೆಸಿಕೊಂಡು ಬರುತ್ತಿರುವುದು ಪ್ರಶಂಸನೀಯ ಕೆಲಸವಾಗಿದ್ದು, ಇದು ಜನಮೆಚ್ಚುಗೆಯ ಕೆಲಸವಾಗಿದ್ದು, ರಾಜ್ಯ ರೆಡ್ ಕ್ರಾಸ್ ಸಂಸ್ಥೆಯಿಂದ ಹಾಗೂ ರಾಜ್ಯಪಾಲರಿಂದ ಅನೇಕ ಪ್ರಶಸ್ತಿಗಳನ್ನು ಪಡೆದಿರುವುದು ಸಾಕ್ಷಿಯಾಗಿದೆ ಎಂಬುದಾಗಿ ಹೇಳಿದರು.
ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರ್ ರಾಜ್ ಮಾತನಾಡಿ, ಈ ದಿನ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ನುರಿತ ತಜ್ಞವೈದ್ಯರುಗಳು ಹಾಗೂ ಲಯನ್ಸ್ ಆಸ್ಪತ್ರೆ ಕಣ್ಣಿನ ಡಾಕ್ಟರ್ ಗಳು ಆಗಮಿಸಿದ್ದು, ಪ್ರತಿಯೊಬ್ಬರೂ ಸೂಕ್ತ ತಪಾಸಣೆ ನಡೆಸಿಕೊಳ್ಳುವ ಮೂಲಕ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ಈ ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಅಧ್ಯಕ್ಷರಾದ ಬಿ.ಕೆ.ನಾಗಣ್ಣ ಮಾತನಾಡಿದರು ಕಾರ್ಯಕ್ರಮದಲ್ಲಿ ಎಲ್.ಆನಂದಶೆಟ್ಟಿ, ಹೆಚ್.ಎಸ್.ಸುಂದರ್ ರಾಜ್, ಹೆಚ್.ಎಸ್. ನಾಗರಾಜ್ ಗುಪ್ತಾ, ಎಲ್.ಆನಂದಶೆಟ್ಟಿ, ಮಲ್ಲೇಶಪ್ಪ, ಎಸ್.ಜೋಗಪ್ಪ, ಪಿ.ಆರ್.ಸತೀಶ್ ಬಾಬು, ದೇವರಾಜ್ ಮೂರ್ತಿ, ರಂಗನಾಥಪ್ಪ, ಇಸ್ಮಾಯಿಲ್ ಜಬಿವುಲ್ಲಾ, ಗೀತಾರಾಧಾಕೃಷ್ಣ, ನಾಗಸುಂದರಮ್ಮ, ಜಯಚಂದ್ರವದನ, ಪದ್ಮಜಾ, ಸರಸ್ವತಿನಾಗರಾಜ್, ಸಂಗೀತ, ವೀಣಾ, ಸೌಮ್ಯ, ನುರಿತ ತಜ್ಞ ವೈದ್ಯರಾದ ಡಾ.ಕುಸುಬು ಡಾ.ಶರತ್, ಭರತೇಶ್, ಸೇರಿದಂತೆ ತಜ್ಞ ವೈದ್ಯರುಗಳು ಉಪಸ್ಥಿತರಿದ್ದರು.
