April 11, 2026
005

ಹಿರಿಯೂರು:

ಅಂಗನವಾಡಿ ಕೇಂದ್ರಗಳಿಗೆ ಕಳೆದ 2025ರಲ್ಲಿ ನೀಡಿದಂತೆ 2026 ರಲ್ಲಿಯೂ ಸಹ ಒಂದು ತಿಂಗಳ ಬೇಸಿಗೆ ರಜೆ ನೀಡಬೇಕು, ಉಳಿದ ದಿನಗಳಲ್ಲಿ ನೋಂದಣಿ ಅಭಿಯಾನ, ಟಿಹೆಚ್ಆರ್ ಹಾಕುವ ಕೆಲಸಗಳನ್ನು ಹಾಕಬೇಕು ಎಂಬುದಾಗಿ ಕರ್ನಾಟಕ  ರಾಜ್ಯ ಅಂಗನವಾಡಿ ನೌಕರರ ಸಂಘದ ಗೌರವಾಧ್ಯಕ್ಷರಾದ ಅನಸೂಯಮ್ಮ ಹೇಳಿದರು.

ನಗರದ ಮಹಿಳಾ ಮತ್ತು ಮಕ್ಕಳಅಭಿವೃದ್ಧಿ ಇಲಾಖೆ ಸಭಾಂಗಣದಲ್ಲಿ 2025 ರಲ್ಲಿ ನೀಡಿದಂತೆ 2026ರಲ್ಲಿಯೂ 30 ದಿನಗಳ ಬೇಸಿಗೆ ರಜೆಯನ್ನು ನೀಡುವಂತೆ ಒತ್ತಾಯಿಸಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.

ಈ 2026ನೇ ಸಾಲಿನ ಬೇಸಿಗೆ ರಜೆ ನೀಡಲು ಸರ್ಕಾರದ ಆದೇಶ ಸಂಖ್ಯೆ 130 ಐಸಿಡಿ 2026 ಮಾರ್ಚ್ 26ರ ಆದೇಶದಲ್ಲಿ 40 ದಿನಗಳ ಬೇಸಿಗೆ ರಜೆಯನ್ನು ಎಪ್ರಿಲ್ 1 ರಿಂದ ಮೇ 10ರವರೆಗೆ ನೀಡಲಾಗಿದೆ. ಎಪ್ರಿಲ್ 16 ರಿಂದ ಎಪ್ರಿಲ್ 30ರವರೆಗೆ ಮಾತ್ರ ಬೇಸಿಗೆ ರಜೆಯ ಅವಧಿ, ಉಳಿದಂತೆ 10 ದಿನಗಳ ನೋಂದಣಿ ಅಭಿಯಾನ ಮತ್ತು 15 ದಿನ ಹೊರತುಪಡಿಸಿ ಉಳಿದಂತೆ ದಿನಗಳಲ್ಲಿ ಕೇಂದ್ರ ತೆರೆದಿರಬೇಕೆಂದು ಆದೇಶಿಸಿದ್ದು, ಇದು ಬದಲಾವಣೆ ಮಾಡಬೇಕು, ಈಗಿರುವ ಆದೇಶವನ್ನು ಬದಲಾವಣೆ ಮಾಡಿ ಪುನರ್ ಆದೇಶ ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ  ರಾಜ್ಯ ಅಂಗನವಾಡಿ ನೌಕರರ ಸಂಘದ ಗೌರವಾಧ್ಯಕ್ಷರಾದ ಅನಸೂಯಮ್ಮ, ಅಧ್ಯಕ್ಷರಾದ ಬಿ.ಪಿ. ನಿರ್ಮಲ, ಉಪಾಧ್ಯಕ್ಷರಾದ ಸಿ. ಜಯಮ್ಮ, ಖಚಾಂಚಿ ಎಸ್. ಕವಿತ, ಪ್ರಧಾನ ಕಾರ್ಯದರ್ಶಿಗಳಾದ ಜೆ. ಕ್ರೀಷ್ಟಿ ಜುನೇಟಾ ಹಾಗೂ ಅನಿತಶ್ರೀ, ಹೇಮಲತಾ, ಈರಕ್ಕೆ, ಶ್ರೀದೇವಿ, ಹೆಚ್, ಓ ಆರತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *