April 11, 2026
006

ಹಿರಿಯೂರು:

ಚೆನ್ನೈನ ಸತ್ಯಭಾಮ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರ ಮಟ್ಟದ ಜಾನಪದ ಕಲಾಮೇಳದ ಡೊಳ್ಳುಕುಣಿತ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ತಂಡ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದೆ.

ಈ ತಂಡದಲ್ಲಿ ಹಿರಿಯೂರಿನ ತ್ರಿಶಾ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಕಾಲೇಜು ತಂಡ ಡೊಳ್ಳು ಕುಣಿತದ ನೃತ್ಯ ಸ್ಪರ್ಧೆಯಲ್ಲಿ ಅಂತರ ವಿಶ್ವವಿದ್ಯಾಲಯ, ರಾಜ್ಯ ಮಟ್ಟ, ರಾಷ್ಟ್ರ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿ ಅಂತರಾಷ್ಟ್ರೀಯ ಸ್ಪರ್ಧೆಗೆ ಗೆ ಆಯ್ಕೆಯಾಗಿದೆ.

ಈ ತಂಡದಲ್ಲಿರುವ ತ್ರಿಶಾ ಗುಜ್ಜಾರ್ ಅವರನ್ನು ಐಸಿರಿ ಕಲಾ ವೃಂದದ ಅಧ್ಯಕ್ಷ ಶಿವಶಂಕರ ಮಠದ್, ಡಿ.ಎಂ.ಸಿದ್ದಗಂಗಾ, ಸಿರೀಶ್ ಆರ್.ಎಸ್.ಮಠದ್, ಭರತನಾಟ್ಯ ಕಲಾವಿದೆ ಶ್ರೀಗೌರಿ ಆರ್.ಎಸ್. ಮಠದ್, ಕಲಾಸಂಪದ ನಾಟ್ಯ ಶಾಲೆಯ ಗೀತಾ ಭಟ್, ನಾಗಶ್ರೀ ಭಟ್, ಪರಮೇಶ್ವರ ಭಟ್ ಅಭಿನಂದಿಸಿದ್ದಾರೆ.

About The Author

Leave a Reply

Your email address will not be published. Required fields are marked *