
ಹಿರಿಯೂರು:
ನಗರದ ‘ದಕ್ಷಿಣಕಾಶಿ’ ಎಂದೇ ಪ್ರಸಿದ್ಧವಾದ ಶ್ರೀತೇರುಮಲ್ಲೇಶ್ವರಸ್ವಾಮಿ ದೇವಾಲಯಕ್ಕೆ ನಿವೃತ್ತ ಆಂಗ್ಲಭಾಷಾ ಪರಿವೀಕ್ಷಕ ಎಚ್.ಎಂ. ಬಸವರಾಜಯ್ಯ ಹಾಗೂ ಸಾವಿತ್ರಮ್ಮ ಕುಟುಂಬದವರು ದೇವತಾ ಕಾರ್ಯಗಳ ವಿಶೇಷ ಸಂದರ್ಭದಲ್ಲಿ ಉಪಯೋಗಿಸುವ ಎರಡು ನೂತನ ಛತ್ರಿಗಳನ್ನು ಸಮರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಎಚ್.ಎಂ.ಬಸವರಾಜಯ್ಯ ಮತ್ತು ಸಾವಿತ್ರಮ್ಮರವರ ಕುಟುಂಬದವರು ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಿಸಿದರು. ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಕಚೇರಿ ಕಂದಾಯ ಅಧಿಕಾರಿ ಮಾಯಾವರ್ಮ, ಜಂಗಮರಾದ ಉಮೇಶ ಗುಡಾಣಮಠ್, ತೇಜೇಶ್ವರ್, ಭುವನೇಶ್ವರ್, ಮಮತಾ, ಅರ್ಚಕರಾದ ವಿಶ್ವನಾಥ ಆಚಾರ್, ತಳವಾರ ನಾಯಕ ಭೋಜರಾಜ್, ನಿವೃತ್ತ ಪ್ರಾಂಶುಪಾಲ ಎಚ್.ಟಿ.ಚಂದ್ರಶೇಖರಯ್ಯ, ನಿವೃತ್ತ ಶಿಕ್ಷಕ ಪ್ರಕಾಶ್, ಡಾ.ನಾಗೇಶ್, ನಿರಂಜನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
