
ಹಿರಿಯೂರು:
ನಗರದ ಕಾಂಗ್ರೆಸ್ ಕಚೇರಿಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕರ್ನಾಟಕ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರ ಜನ್ಮದಿನವನ್ನು ಆಚರಿಸಲಾಯಿತು.
ನಂತರ ನಗರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಾಲು-ಹಣ್ಣುವಿತರಿಸಿದರಲ್ಲದೆ ತಾಲ್ಲೂಕಿನ ಭೀಮನ ಬಂಡೆಯ ಬಳಿ ಇರುವ ಶ್ರೀಶುಭೋದಯ ವೃದ್ಧಾಶ್ರಮದ ವೃದ್ದರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯರು ಹಾಗೂ ತಾಲ್ಲೂಕು ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷರಾದ ಎಂ.ಎಂ. ಅಮೃತೇಶ್ವರಸ್ವಾಮಿ, ಹಿರಿಯೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಖಾದಿ ಜೆ.ರಮೇಶ್, ತಾಪಂ ಮಾಜಿ ಸ. ಅಂಜಿನಪ್ಪ, ಡಾ.ಸುಜಾತ, ಫಕೃದ್ದೀನ್, ಮಾಜಿ ನಗರಸಭಾ ಅಧ್ಯಕ್ಷರಾದ ಬಾಲು, ಚಂದ್ರಶೇಖರ್, ಮಾಜಿ ನಗರಸಭಾ ಸದಸ್ಯರಾದ ಮಮತ, ಅಂಬಿಕಾ, ಮಂಜುಳಾ, ಶಿವರಂಜನಿ, ರಜೀಯಾ ಸುಲ್ತಾನ, ಎಂ.ಡಿ. ಸಣ್ಣಪ್ಪ, ಕೆ.ಡಿ.ಪಿ ಸದಸ್ಯರಾದ ವಿ.ಶಿವಕುಮಾರ್, ಜ್ಞಾನೇಶ್, ಸಲ್ಮಾನ್, ಎಂ.ಗುರುಪ್ರಸಾದ್, ಅಲ್ಪಸಂಖ್ಯಾತರ ಅಧ್ಯಕ್ಷರಾದ ನೌಷಾದ್, ಎಂ.ಡಿ.ಫಾರೂಕ್, ಕಬ್ಬಡಿರವಿ, ಅಣ್ಣೇಶ್, ಶಿವಕುಮಾರ, ಯುವ ಕಾಂಗ್ರೇಸ್ ಮುಖಂಡರಾದ ದರ್ಶನ್, ಶಿವಕುಮಾರ್, ಅಭಿಪಟೇಲ್, ಜೆ.ಜಿ.ಹಳ್ಳಿ ಕೇಶವಬೀರೇನಹಳ್ಳಿ, ಕರುಣ, ಶಾಹೀದ್, ಡಿ.ಕೆ.ರಘು., ದಾದಾಪೀರ್, ರಫೀಕ್, ತಿರುಪತಿ, ದಾದಾಪೀರ್, ಎಂ.ಆರ್.ಬಾಬಾ, ಇರ್ಪಾನ್, ಲಕ್ಷ್ಮಣ, ಇಂದಿರ, ವೈ.ನಾಗರಾಜ್, ವೃಷಬೇಂದ್ರ, ಅಯೂಬ್, ಮಲ್ಲಿಗಮ್ಮ, ಸುಹೇಲ್, ತಿಪ್ಪೇಸ್ವಾಮಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
