
ಹಿರಿಯೂರು :
ಕರ್ನಾಟಕ ರಾಜ್ಯದ ಅತ್ಯುನ್ನತ ಸುದ್ದಿ ವಾಹಿನಿ ಏಷಿಯಾ ನೆಟ್ “ಸುವರ್ಣ ನ್ಯೂಸ್” ಮತ್ತು ಜನಪ್ರಿಯ ದಿನಪತ್ರಿಕೆ ಕನ್ನಡಪ್ರಭ ವತಿಯಿಂದ ನೀಡಲಾಗುವ ಸಮಾಜ ಸೇವೆಗೆ 2026ರ ಅತ್ಯುನ್ನತ ಮಹಿಳಾ ಸಾಧಕಿ ಪ್ರಶಸ್ತಿಗೆ ನಮ್ಮ ಹಿರಿಯೂರು ತಾಲೂಕಿನ ಹೆಮ್ಮೆಯ ಮನೆಮಗಳು, ಮಾಜಿ ಶಾಸಕರು ಹಾಗೂ ಕೆ.ಪಿ.ಸಿ.ಸಿ ಪ್ರಧಾನಕಾರ್ಯದರ್ಶಿಗಳಾದ ಶ್ರೀಮತಿ ಕೆ.ಪೂರ್ಣಿಮಾಶ್ರೀನಿವಾಸ್ ರವರು ಭಾಜನರಾಗಿರುತ್ತಾರೆ.

ಸಮಾಜ ಸೇವೆಗೆ 2026ರ ಅತ್ಯುನ್ನತ ಮಹಿಳಾ ಸಾಧಕಿ ಪ್ರಶಸ್ತಿ ಪಡೆದಿರುವ ನಮ್ಮ ಹಿರಿಯೂರು ಕ್ಷೇತ್ರದ ಮಾಜಿ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರಿಗೆ “ಹಿರಿಯೂರು ನ್ಯೂಸ್” ತಂಡದ ವತಿಯಿಂದ ರಾಜ್ಯ ಮಾಧ್ಯಮ ಅಕಾಡೆಮಿಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರು ಹನುಮಂತರಾಯಪ್ಪ, ಹಾಗೂ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆ ರಂಗನಾಥ್, ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್, ಜಗದೀಶ್, ಪರಮೇಶ್ವರಪ್ಪ, ಇರ್ಪಾನ್ ವುಲ್ಲಾ, ಹಿದಾಯತ್ ವುಲ್ಲಾ, ವೆಂಕಟೇಶ್ ಇವರುಗಳು ಅಭಿನಂದಿಸಿದ್ದಾರೆ.
